ಖಾಸಗಿ ಶಾಲೆಗಿಂತ ಕಡಿಮೆ ಇಲ್ಲವೆಂಬಂತೆ ಹೈಟೆಕ್ ಸರ್ಕಾರಿ ಶಾಲೆ

ತುಮಕೂರು, ಮಾ.8- ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿ ಸರಿಯಾಗಿಲ್ಲ. ಮೂಲಭೂತ ಸೌಲಭ್ಯಗಳಿಲ್ಲ. ಈಗಿನ ಕಾಲದಲ್ಲಿ ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ವಿರುದ್ಧವಾಗಿ ಮಸ್ಕಲ್ ಗ್ರಾಮದಲ್ಲಿ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲವೆಂಬಂತೆ ಹೈಟೆಕ್ ಆಗಿ ನಿರ್ಮಾಣಗೊಂಡು ಇಂದು ರಾಜ್ಯಪಾಲ ವಜುಬಾಯಿ ವಾಲಾ ಅವರು ಉದ್ಘಾಟಿಸಿದರು.

ಕೆಲವು ತಿಂಗಳ ಹಿಂದೆ ಈ ಸರ್ಕಾರಿ ಶಾಲೆಯ ಅವ್ಯವಸ್ಥೆಯನ್ನು ಕಂಡು ಪೆÇೀಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದರು. ಇಂದು ಈ ಶಾಲೆಯ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಕಂಡು ನಿಬ್ಬೆರಗಾಗಿದ್ದಾರೆ.

ಒಂದು ವರ್ಷದಲ್ಲಿ ಇಡೀ ಶಾಲೆಯ ಚಿತ್ರಣವೇ ಬದಲಾಗಿದ್ದು , ಮಸ್ಕಲ್ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ. ಪ್ರಾಥಮಿಕ , ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ಹೊಂದಿರುವ ಹಳೆಯ ಶಾಲೆಯ ಕಟ್ಟಡ ದುಃಸ್ಥಿತಿ ಕಂಡು ವಿದ್ಯಾರ್ಥಿಗಳು ಹಾಗೂ ಪೆÇೀಷಕರಲ್ಲಿ ಅಸಮಾಧಾನ ಉಂಟಾಗಿತ್ತು.

92 ವರ್ಷಗಳ ಹಳೆಯದಾದ ಈ ಶಾಲೆಯ ಕಟ್ಟಡ ಮೂಲಭೂತ ಸೌಕರ್ಯಗಳಿಲ್ಲದೆ ಅಳಿವಿನಂಚಿನಲ್ಲಿದ್ದು , ಶಾಲೆಯ ಪರಿಸ್ಥಿತಿಯನ್ನು ಕಂಡ ಇನ್‍ಕ್ಯಾಂಪ್ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಲ್ಲಿ (ಸಿಎಸ್‍ಆರ್ ಫಂಡ್) 60 ಲಕ್ಷ , ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರಿಂದ 25 ಲಕ್ಷ , ವಿಧಾನ ಪರಿಷತ್ ಸದಸ್ಯರಿಂದ ಆಯನೂರು ಮಂಜುನಾಥ್ ಅವರಿಂದ 5 ಲಕ್ಷ , ಸ್ಥಳೀಯ ಶಾಸಕರ ಅನುದಾನದಡಿ 40 ಲಕ್ಷ, ಶಾಸಕ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರಿಯಾ 10 ಲಕ್ಷ ರೂ. ಅನ್ನು ಅಭಿವೃದ್ಧಿಗೆ ಹಣ ನೀಡಿದ್ದಾರೆ. ಇದರ ಜತೆಗೆ ಗ್ರಾಮಾಂತರ ಶಾಸಕ ಸುರೇಶ್‍ಗೌಡ ಕೂಡ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

1926ರಲ್ಲಿ ಈ ಶಾಲೆಯು ಆರಂಭವಾಗಿದ್ದು , 1946ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, 1984ರಲ್ಲಿ ಪ್ರೌಢಶಾಲೆ, 1993ರಲ್ಲಿ ಪದವಿ ಪೂರ್ವ (ಕಲಾ ವಿಭಾಗ), 2017ರಲ್ಲಿ ವಾಣಿಜ್ಯ ವಿಭಾಗ ಪ್ರಾರಂಭವಾಯಿತು.

ಈ ಶಾಲೆಯಲ್ಲಿ 20ಕ್ಕೂ ಹೆಚ್ಚು ರೂಂಗಳನ್ನು ಹೊಂದಿದ್ದು , ಲ್ಯಾಬ್ 30 ಕಂಪ್ಯೂಟರ್‍ವುಳ್ಳ ಕೊಠಡಿ, ಹೈಟೆಕ್ ಶೌಚಾಲಯ , ಗ್ರಂಥಾಲಯ ಸಭಾಂಗಣ, ಆಟದ ಮೈದಾನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ