ಎಟಿಎಂನಿಂದ 18 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಕಳವು ಮಾಡಿ ಪರಾರಿ

ಮುಜಫರ್‍ನಗರ್, ಮಾ.7-ಸರ್ವಿಸ್ ಎಂಜಿನಿಯರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಎಟಿಎಂನಿಂದ 18 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ಇಂಡಿಯನ್ ಓವರ್‍ಸೀಸ್ ಬ್ಯಾಂಕ್(ಐಒಬಿ)ನ ಎಟಿಎಂಗೆ ಬಂದ ವ್ಯಕ್ತಿಯೊಬ್ಬ ತಾನು ಸರ್ವಿಸ್ ಎಂಜಿನಿಯರ್ ಎಟಿಎಂ ಯಂತ್ರವನ್ನು ಸರ್ವಿಸ್ ಮಾಡಬೇಕು ಎಂದು ಹೇಳಿದ. ಇದನ್ನು ನಂಬಿ ಬ್ಯಾಂಕ್‍ನ ಸಿಬ್ಬಂದಿ ಆತನನ್ನು ಸ್ಟ್ರಾಂಗ್ ರೂಂ(ಭದ್ರತಾ ಕೊಠಡಿ)ಗೆ ಕರೆದೊಯ್ದರು. ಸಿಬ್ಬಂದಿಗೆ ಅರಿವಿಲ್ಲದಂತೆ ರಹಸ್ಯ ಪಾಸ್‍ವರ್ಡ್‍ಗಳನ್ನು ಭೇದಿಸಿ ಎಟಿಎಂನಿಂದ 18.37 ಲಕ್ಷ ರೂ.ಗಳನ್ನು ಎಗರಿಸಿ ಚಾಲಾಕಿ ಕಳ್ಳ ಪರಾರಿಯಾದ.
ಎಟಿಎಂನಲ್ಲಿ ನಗದು ಕಡಿಮೆ ಇದೆ ಎಂದು ಗ್ರಾಹಕರು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತು.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಬ್ಯಾಂಕ್‍ನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸದರ್ ಪೆÇಲೀಸ್ ಠಾಣೆ ಅಧಿಕಾರಿ ಅವಿನಾಶ್ ಗೌತಮ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ