ದೇವಾಲಯ ಜಮೀನುಗಳನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಹಿಂದೂ ಜನಜಾಗೃತಿ ಸಮಿತಿ ಆರೋಪ
ಬೆಂಗಳೂರು, ಮಾ.7- ಕರ್ನಾಟಕ ಹಿಂದೂ ಧರ್ಮ ಸಂಸ್ಥಾನ ಮತ್ತು ಧರ್ಮಾದಾಯ ದತ್ತಿ ಅಧಿನಿಯಮವನ್ನು ಜಾರಿಗೊಳಿಸಿ ಸರ್ಕಾರದಿಂದ ದೇವಾಲಯ ಜಮೀನುಗಳನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ಸರ್ಕಾರವು ಹಿಂದು ದೇವಾಲಯಗಳಲ್ಲಿ ಸರಿಯಾದ ನಿರ್ವಹಣೆ ಅಳವಡಿಸುವುದಕ್ಕಾಗಿ ಸರ್ಕಾರವು ಕರ್ನಾಟಕ ಹಿಂದು-ಧರ್ಮ ಸಂಸ್ಥಾನ ಮತ್ತು ಧರ್ಮಾದಾಯ ದತ್ತಿ ನಿಯಮವನ್ನು ಹೇಳಿಕೆಗಷ್ಟೇ ಸೀಮಿತವಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ದೇವಾಲಯಗಳು ಇಲ್ಲವಾಗಿ, ಹಿಂದು ಧರ್ಮದ ಧಾರ್ಮಿಕ ನಂಬಿಕೆಗಳಿಗೆ ಅಡಚಣೆ ಎದುರಾಗಲಿದೆ ಎಂದು ಆರೋಪಿಸಿದರು.
ಈ ಅಧಿನಿಯಮದಂತೆ ಸರ್ಕಾರವು ದೇವಾಲಯದ ಸಮೀಕ್ಷೆ ನಡೆಸಿ ಅದರ ರಾಜ್ಯಪತ್ರವನ್ನು ಮುದ್ರಿಸಬೇಕು ಹಾಗೂ ಅದನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ದೇವಾಲಯದ ಜಮೀನು ಅತಿಕ್ರಮಣವನ್ನು ಸಾರ್ವಜನಿಕ ಅತಿಕ್ರಮಣದಂತೆ ಪರಿಗಣಿಸಬೇಕು ಎಂದು ತಿಳಿಸಿದರು.
ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯಾದ್ಯಂತ ಚಳುವಳಿ ನಡೆಸಲಿದ್ದೇವೆ ಎಂದು ಮೋಹನ್ ಗೌಡ ಸ್ಪಷ್ಟಪಡಿಸಿದರು.