![house-robbery](http://kannada.vartamitra.com/wp-content/uploads/2018/02/house-robbery-678x381.jpg)
ತುಮಕೂರು,ಮಾ.7-ಕಾಲೇಜಿನ ಬೀಗ ಒಡೆದು ಲ್ಯಾಪ್ಟಾಪ್ಗಳನ್ನು ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಪಾವಗಡ ಪಟ್ಟಣ ಠಾಣೆ ಪೆÇಲೀಸರು ಬಂಧಿಸಿ 26 ಲ್ಯಾಪ್ಟಪ್, 5 ಕಂಪ್ಯೂಟರ್ ಸೆಟ್ಗಳು, ಪೆÇೀಡಿಯಂ ಸ್ಪೀಕರ್, ಸಿಸಿ ಕ್ಯಾಮೆರಾಗಳು, ಟಿವಿ ಸೇರಿದಂತೆ 16 ಲಕ್ಷ ರೂ.ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾವಗಡ ತಾಲ್ಲೂಕಿನ ವೀರಮ್ಮನಹಳ್ಳಿ ಗ್ರಾಮದ ನಿವಾಸಿ ರಘು ಬಂಧಿತ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಆರೋಪಿ ದೇವರಾಜ್ ತಲೆಮರೆಸಿಕೊಂಡಿದ್ದಾನೆ.
ಪಾವಗಡ ಪಟ್ಟಣದ ಹೊರವಲಯದಲ್ಲಿರುವ ವೈ.ಇ.ರಂಗಶೆಟ್ಟಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ ರಘು ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ದೇವರಾಜ್ ಎಂಬಾತನೊಂದಿಗೆ ಸೇರಿಕೊಂಡು ಲ್ಯಾಪ್ಟಾಪ್ಗಳ ಕಳ್ಳತನಕ್ಕೆ ಸಂಚು ರೂಪಿಸಿದ್ದನು.
ಅದರಂತೆ ಜ.1ರಂದು ರಾತ್ರಿ ಈ ಕಾಲೇಜಿನ ಬೀಗ ಮುರಿದು 25 ಲ್ಯಾಪ್ಟಾಪ್ಗಳನ್ನು ಕಳ್ಳತನ ಮಾಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ 16 ಲಕ್ಷ ಮೌಲ್ಯದ ಕಂಪ್ಯೂಟರ್ಗಳು, ಪ್ರಿಂಟರ್ಗಳು,ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕಾಲೇಜಿನಲ್ಲಷ್ಟೇ ಅಲ್ಲದೆ ಕೃಷಿ ಇಲಾಖೆಯಲ್ಲಿ ಒಂದು ಲ್ಯಾಪ್ಟಾಪ್ನ್ನು ಮತ್ತು ಕಾಲೇಜಿನಲ್ಲಿ ಪೆÇೀಡಿಯಂ ಸ್ಪೀಕರ್, ಯುಪಿಎಸ್, ಬ್ಯಾಟರಿಗಳು, ಸ್ಟಿಕರ್ಗಳು, ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕಂಪ್ಯೂಟರ್ಗಳು, ಸ್ಕ್ಯಾನರ್, ಪ್ರಿಂಟರ್ಗಳು, ಬಯೋಮೆಟ್ರಿಕ್ ಹಾಗೂ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಯುಪಿಎಸ್, ಐಐಟಿ ಕಾಲೇಜಿನಲ್ಲಿ ಕಲರ್ ಟಿವಿ ಹಾಗೂ ಕಂಪ್ಯೂಟರ್ಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು , ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್, ಹೆಚ್ಚುವರಿ ಪೆÇಲೀಸ್ ಅಧಿಕಾರಿ ಶೋಭಾ ರಾಣಿ, ಡಿವೈಎಸ್ಪಿ ಕಲ್ಲೇಶಪ್ಪ , ವೃತ್ತ ನಿರೀಕ್ಷಕರಾದ ಮಹೇಶ್, ಪಿಎಸ್ಐ ಮಧುಸೂದನ್, ಎಎಸ್ಐ ರಾಮಾಂಜನೇಯ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.