ಆಂಗ್ಲ ಮಾದ್ಯಮ ಶಾಲೆಯಲ್ಲಿ ಡೊನೇಷನ್ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ

ಕೊಳ್ಳೇಗಾಲ,ಮಾ.7- ಪಟ್ಟಣದ ಎಸ್.ಡಿ.ಎ ಆಂಗ್ಲ ಮಾದ್ಯಮ ಶಾಲೆಯಲ್ಲಿ ಡೊನೇಷನ್ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೆÇೀಷಕರು ಶಾಲೆಯ ಮುಂದೆ ಕುಳಿತು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಪೆÇೀಷಕ ಹರೀಶ್ ಶಾಲೆಯಲ್ಲಿ ಶುಲ್ಕ ಹಣವನ್ನು ಅಲ್ಪ ಸ್ವಲ್ಪ ಉಳಿಸಿ ಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಿಸುತ್ತಿಲ್ಲ. ಸೋಮವಾರ ನಡೆದ ಪರೀಕ್ಷೆಗೂ ಸಹ ಕೂರಿಸಲ್ಲಿಲ್ಲ. ನಾವು ಹಣವನ್ನು ಕಟ್ಟುತ್ತೇವೆ ಆದರೆ ಸ್ವಲ್ಪ ಸಮಯಬೇಕು ಎಂದು ಕೇಳಿದರು ಸಹ ನಮ್ಮ ಮಕ್ಕಳನ್ನು ತರಗತಿಯಿಂದ ಹೂರ ಹಾಕಿದ್ದಾರೆ ಎಂದು ದೂರಿದರು.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಶಾಲಾ ಆಡಳಿತ ಮಂಡಲಿ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗೆ ನೇರ ಹೊಣೆ ಆಡಳಿತ ಮಂಡಳಿಯವರೇ ಆಗಿರುತ್ತದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕರೆಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಶಾಲೆಯಲ್ಲಿ ಡೊನೇಷನ್ ಹಾವಳಿ ಮಿತಿ ಮೀರಿದ್ದು ಅದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಆನಂದ್, ಶಿವಕುಮಾರ್, ಸುಕನ್ಯ , ಮಲ್ಲರಾಜು ಉತ್ತಂಬಳ್ಳಿ, ಶಂಕರ ಸತ್ತೇಗಾಲ, ಶಿವಶಂಕರ್, ಸಿದ್ದರಾಜು, ನಟರಾಜು, ಹರೀಶ್, ಕುಮಾರ್, ನಾಗರಾಜು ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ