ಬೆಂಗಳೂರು(ಮಾ.07): ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿಯಲಾಗಿದ್ದು, ನ್ಯಾಯಮೂರ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಲೋಕಾಯುಕ್ತ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ವಿಚಾರಣೆಗೆ ಬಂದಿದ್ದ ತೇಜಸ್ ಶರ್ಮಾ ಚಾಕುವಿನಿಂದ ಲೋಕಾಯುಕ್ತರನ್ನು ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿರಯವ ವಿಶ್ವನಾಥ್ ಶೆಟ್ಟಿ ಅವರನ್ನು ಹತ್ತಿರದ ಮಲ್ಯ ಆಸ್ಫತ್ರಗೆ ದಾಖಲಿಸಲಾಗಿದೆ.
ಈ ತೇಜಸ್ ಶರ್ಮಾ ಯಾರು..? ಯಾವ ವಿಚಾರಣೆಯನ್ನು ತೇಜಸ್ ಎದುರಿಸುತ್ತಿದ್ದ ಎಂಬ ಮಾಹಿತಿ ಇನ್ನಷ್ಟೇ ಬಯಲಾಗಬೇಕಿದೆ.
ಘಟನೆಗೆ ಮಾಜಿ ಪ್ರಧಾನಿ ದೆವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದರೆ,ಸಿಎಮ್ ಮಲ್ಯ ಆಸ್ಪತ್ರೆಗೆ ಧಾವಿಸಿದ್ದಾರೆ
ಪ್ರಾಥಮಿಕ ಚಿಕಿತ್ಸೆ ನೀಡಿರುವ ವೈದ್ಯರು ಪ್ರಾಣಾಪಾಯದಿಂದ ಪಾರು ಎಂದು ತಿಳಿಸಿದ್ದಾರೆ