ನಂಜನಗೂಡು, ಮಾ.6- ಪೆÇಲೀಸ್ ಇಲಾಖೆಗೆ ಲಾಟಿ, ಬಂದೂಕು ನೀಡಿರುವುದು ಕೇವಲ ಆಯುಧ ಪೂಜೆಗಲ್ಲ . ಸಂದರ್ಭ ಬಂದಾಗ ನಿರ್ದಾಕ್ಷಿಣ್ಯವಾಗಿ ಯಾವುದೇ ಹಿಂಜರಿಕೆ ಇಲ್ಲದೆ ಇದನ್ನು ಉಪಯೋಗಿಸುವ ಉದ್ದೇಶದಿಂದ ಎಂದು ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಹೇಳಿದರು.
ನಗರದ ಶ್ರೀಕಂಠೇಶ್ವರ ರಥ ಬೀದಿಯಲ್ಲಿ ಇಲಾಖೆ ನಿರ್ಮಿಸಿರುವ ಪೆÇಲೀಸ್ ಕಲ್ಪವೃಕ್ಷ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧಿಗಳನ್ನು ಪತ್ತೆ ಹಚ್ಚುವುದು, ಅಪರಾಧಗಳನ್ನು ತಡೆಯುವುದು ನಮ್ಮ ಕರ್ತವ್ಯ ಎಂದರು.
ಜನತೆಗೆ ಇನ್ನೂ ಇಲಾಖೆಯ ಮೇಲೆ ಭಯ, ಅಪನಂಬಿಕೆ ಇದೆ. ಇದಕ್ಕೆ ನಾವೂ ಸಹ ಕಾರಣರು ಎಂದು ಹೇಳಿದ ಅವರು, ಇದನ್ನು ಹೋಗಲಾಡಿಸಿ ಜನತೆ ವಿಶ್ವಾಸ ಗಳಿಸುವ ಕೆಲಸ ನಮ್ಮಿಂದಾಗಬೇಕಿದೆ ಎಂದರು.
ಅಪರಾಧಗಳನ್ನು ತಡೆಯುವ ಸಂದರ್ಭದಲ್ಲಿ ಲಾಟಿ ಹಾಗೂ ಬಂದೂಕುಗಳಿಗೂ ಕೆಲಸ ನೀಡಿ. ಇವು ಇರುವುದು ಕೇವಲ ಆಯುಧ ಪೂಜೆಗಲ್ಲ ಎಂಬುದನ್ನು ನೆನಪಿಟ್ಟು ವ್ಯವಹರಿಸಿ ಎಂದ ಅವರು, ಯಾವುದೋ ವ್ಯಕ್ತಿ ನ್ಯಾಯ ಕೇಳಲು ಠಾಣೆಗೆ ಬಂದಾಗ ಆತನಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿ ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಹಸಿದವನಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಅದಕ್ಕಾಗಿಯೆ ಇಲಾಖೆಯ ಕ್ಷೇಮನಿಧಿ ಈ ಪೆÇಲೀಸ್ ಕ್ಯಾಂಟಿನ್ ನಿರ್ವಹಣೆ ಮಾಡಲಾಗುತ್ತದೆ ಎಂದರು
24×7 ದಿನವಿಡಿ ಕಾರ್ಯ ನಿರ್ವಹಿಸುವ ಇಲಾಖೆಯ ಸಿಬ್ಬಂದಿಗಳಿಗೆ ರುಚಿಶುಚಿಯಾದ ಊಟ ನೀಡುವುದರ ಜತೆಗೆ ಸಾರ್ವಜನಿಕರಿಗೂ ರಿಯಾಯಿತಿ ದರದಲ್ಲಿ 5 ರೂ. ಗೆ ಕಾಫಿ, 10 ರೂ.ಗಳಿಗೆ ತಿಂಡಿ , 20 ರೂ.ಗಳಿಗೆ ಊಟವನ್ನು ಇಲ್ಲಿ ನೀಡಲಾಗುವದು ಎಂದು ಅವರು ಹೇಳಿದರು.
ನಂಜನಗೂಡಿನಲ್ಲಿ ಮೀಟರ್ ಬಡ್ಡಿ, ಮಾರಕ ಆಯುಧಗಳ ಸಂಗ್ರಹಣೆಯಂತಹ ಅಪರಾಧಗಳು ನಡೆಯುತ್ತಿದ್ದು, ಅವುಗಳನ್ನು ಮಟ್ಟ ಹಾಕಬೇಕಿದೆ. ಇತ್ತೀಚೆಗೆ ನಡೆದ ಹೆದ್ದಾರಿ ಡಕಾಯಿತಿ ವಂಚನೆ ಮುಂತಾದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸ್ಥಳಿಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಮನೆಗಳ ದರೋಡೆ ಪತ್ತೆ, ಮೀಟರ್ ಬಡ್ಡಿ ನಿಯಂತ್ರಣ ಆಗಬೇಕಿದೆ ಎಂದು ಹೇಳಿದರು.
ಅಪರ ಪೆÇಲೀಸ್ ಅಧಿಕಾರಿ ರುದ್ರಮುನಿ, ಎಎಸ್ಪಿ ಅರುಣಾಂಷಿ, ಪ್ರಥಮ ದರ್ಜೆ ಗುತ್ತಿಗೆದಾರ ಯು.ಎನ್. ಪದ್ಮನಾಭರಾವ್, ಬಿಜೆಪಿ ಮುಖಂಡ ಎನ್. ಆರ್. ಕೃಷ್ಣಪ್ಪ ಗೌಡ, ವೃತ್ತ ನಿರೀಕ್ಷಕರಾದ ಗೋಪಾಲಕೃಷ್ಣ , ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.