ಲಾಸ್ ಏಂಜಲಿಸ್, ಮಾ.6-ಅಮೆರಿಕದಲ್ಲಿ ಭಾನುವಾರ ರಾತ್ರಿ ನಡೆದ ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಟನೆಗಾಗಿ ಪುರಸ್ಕಾರ ಪಡೆದ ನಟಿ ಫ್ರಾನ್ಸಿಸ್ ಮ್ಯಾಕ್ಡೋರ್ಮಂಡ್ ಅವರ ಟ್ರೋಪಿಯನ್ನು ಕಾರ್ಯಕ್ರಮ ಮುಗಿಯುವುದರೊಳಗೆ ಕೈಚಳಕ ತೋರಿ ಕದ್ದಿದ್ದ ಚಾಲಾಕಿ ಕಳ್ಳನೊಬ್ಬ ಈಗ ಪೆÇಲೀಸ್ ಅತಿಥಿಯಾಗಿದ್ದಾನೆ.
ಟೆರ್ರಿ ಬಿಯಾಂಟ್(47) ಬಂಧಿತ ವ್ಯಕ್ತಿ.
ಥ್ರೀ ಬಿಲ್ಬೋಡ್ರ್ಸ್ ಔಟ್ಸೈಡ್ ಎಬ್ಬಿಂಗ್, ಮಿಸ್ಸೂರಿ ಸಿನಿಮಾದ ಅದ್ಭುತ ನಟನೆಗಾಗಿ ಫ್ರಾನ್ಸೆಸ್ ಮ್ಯಾಕ್ರ್ಡೋಂಡ್ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದರು. ಅವರು ಗಳಿಸಿದ್ದ ಆಸ್ಕರ್ ಪ್ರಶಸ್ತಿ ಟ್ರೋಫಿಯನ್ನು ಔತಣಕೂಟದ ನಂತರ ಕದಿಯಲಾಗಿತ್ತು. ಈ ಘಟನೆ ನಡೆದ ಕೆಲವು ಸಮಯದ ನಂತರ ಬಿಯಾಂಟ್ನನ್ನು ಬಂಧಿಸಿ ಟ್ರೋಫಿಯನ್ನು ವಶಪಡಿಸಿಕೊಂಡು ನಟಿಗೆ ನೀಡಲಾಯಿತು. ಸಮಾರಂಭದಲ್ಲಿ ಭಾಗವಹಿಸಲು ಅಧಿಕೃತ ಟಿಕೆಟ್ ಹೊಂದಿದ್ದ ಬ್ರಿಯಾಂಟ್ ತನ್ನ ಕೈಚಳಕ ತೋರಿ ಪ್ರಶಸ್ತಿಯನ್ನು ಕದ್ದಿದ್ದ.