ಶಿಲ್ಲಾಂಗ್:ಮಾ-6: ಮೆಘಾಲಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಡೆದ ರಾಜಕೀಯ ಹೈಡ್ರಾಮಾಗಳಿಗೆ ತೆರೆಬಿದ್ದಿದ್ದು, ಲೋಕಸಭೆ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ಅವರ ಪುತ್ರ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ ಸರಕಾರ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನ ನೀಡಿದ್ದು, ಇಂದು ಪ್ರಮಾಣ ಸ್ವೀಕಾರ ಮಾಡುವುದಾಗಿ ಸಂಗ್ಮಾ ತಿಳಿಸಿದ್ದಾರೆ. ಸಂಗ್ಮಾ ಅವರು ರಾಜ್ಯಪಾಲ ಗಂಗಾಪ್ರಸಾದ್ರನ್ನು ಭೇಟಿ ಯಾಗಿದ್ದು, 34 ಶಾಸಕರ (ಎನ್ಪಿಪಿ-19, ಯುಡಿಪಿ-6, ಪಿಡಿಎಫ್-4, ಎಚ್ಎಸ್ಪಿಡಿಪಿ ಮತ್ತು ಬಿಜೆಪಿಯ ತಲಾ 2 ಮತ್ತು ಒಬ್ಬ ಪಕ್ಷೇತರ ಶಾಸಕ) ಬೆಂಬಲವಿರುವ ಪತ್ರವನ್ನು ಹಸ್ತಾಂತರಿಸಿದ್ದರು. ಸೋಮವಾರ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದ ಅವರು, ಮಂಗಳವಾರವೇ ಸಚಿವರು ಪ್ರಮಾಣ ಸ್ವೀಕರಿಸಲಿದ್ದು, ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
Meghalaya ,cm,conrad sangma, taking oath