ಬ್ಯಾಂಕ್ ಕ್ಯಾಷಿಯರ್ ಒಬ್ಬರನ್ನು ಅಪಹರಿಸಿದ್ದ ಪ್ರಕರಣ ನಾಲ್ವರು ದರೋಡೆಕೋರರನ್ನು ಗಲ್‍ಪೇಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ

ಕೋಲಾರ, ಮಾ.6- ಬ್ಯಾಂಕ್ ಕ್ಯಾಷಿಯರ್ ಒಬ್ಬರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದರೋಡೆಕೋರರನ್ನು ಗಲ್‍ಪೇಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲೂಕಿನ ಸುನಿಲ್ (24), ಮುನಿರಾಜು (24), ಮೈಸೂರಿನ ಪಿರಿಯಾಪಟ್ಟಣ ತಾಲೂಕು, ಸೋಮಲಾಪುರ ಗ್ರಾಮದ ಮಂಜು (34), ದೊಡ್ಡಗುಟ್ಟಹಳ್ಳಿಯ ಆಂಜಿ (35) ಬಂಧಿತ ದರೋಡೆಕೋರರಾಗಿದ್ದು, ಇವರಿಂದ ಸ್ಯಾಮ್‍ಸಂಗ್ ಮೊಬೈಲ್, 1500ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ದೇವರಾಜ ಅರಸು ಮೆಡಿಕಲ್ ಕಾಲೇಜು ಸಮೀಪದ ಕೋಟಕ್ ಮಹೀಂದ್ರ ಬ್ಯಾಂಕ್ ಕ್ಯಾಷಿಯರ್ ಗೋಪಾಲಕೃಷ್ಣ ಅವರು ಬೆಂಗಳೂರಿಗೆ ತೆರಳುವ ಸಲುವಾಗಿ ಕಳೆದ ಸೆಪ್ಟೆಂಬರ್ 4ರಂದು ಸಂಜೆ ಕೋಲಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‍ಗಾಗಿ ಕಾಯುತ್ತ ನಿಂತಿದ್ದಾಗ ಕಾರಿನಲ್ಲಿ ಬಂದ ದರೋಡೆಕೋರರು ಇವರನ್ನು ಅಪಹರಿಸಿ 10 ಸಾವಿರ ರೂ. ಮೌಲ್ಯದ ಮೊಬೈಲ್, 2500 ಹಣ, ಐಡಿ ಕಾರ್ಡ್, ಖಾಲಿ ಚೆಕ್ ಪುಸ್ತಕಗಳು, ಬ್ಯಾಂಕ್ ಕೀಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಹೆದ್ದಾರಿಯಲ್ಲಿರುವ ಕೊಂಡರಾಜನಹಳ್ಳಿ ಬಳಿ ಇವರನ್ನು ಕೆಳಗೆ ತಳ್ಳಿ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಲೋಕೇಶ್, ಸಬ್ ಇನ್ಸ್‍ಪೆಕ್ಟರ್ ರವಿಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ದರೋಡೆಕೋರರ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬೇಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ದರೋಡೆಕೋರರು ವಾಸವಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ