ಮನೆಗೆ ಬಿಗ ಒಡೆದು ಕಳ್ಳತನ….

ಮನೆಗೆ ಬಿಗ ಒಡೆದು ಕಳ್ಳತನ….
ಬೆಂಗಳೂರು, ಮಾ.6- ಉದ್ಯಮಿಯೊಬ್ಬರ ಕುಟುಂಬದವರು ವೆಂಕಟೇಶ್ವರನ ದರ್ಶನಕ್ಕೆಂದು ತಿರುಪತಿಗೆ ತೆರಳಿದ್ದಾಗ ಕಳ್ಳರು ಮನೆಯ ಬೀಗ ಒಡೆದು 2.70 ಲಕ್ಷ ಹಣ ಸೇರಿದಂತೆ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಂಸಿ ಲೇಔಟ್‍ನ 12ನೆ ಮುಖ್ಯರಸ್ತೆಯಲ್ಲಿ ಗೋಪಿನಾಥ್ ಎಂಬ ಉದ್ಯಮಿ ವಾಸವಾಗಿದ್ದು, ಇವರ ಕುಟುಂಬದವರು ಮಾ.3ರಂದು ತಿರುಪತಿಗೆ ತೆರಳಿದ್ದಾಗ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಬೀರು ಮೀಟಿ ಅದರಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ 2.70 ಲಕ್ಷ ಹಣ, ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಿದ್ದು, ಇವುಗಳ ಒಟ್ಟು ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ನಿನ್ನೆ ಸಂಜೆ ಗೋಪಿನಾಥ್ ಕುಟುಂಬ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೆÇಲೀಸರಿಗೆ ತಿಳಿಸಿದ್ದಾರೆ.
ವಿಜಯನಗರ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ