ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಪ್ರತೀಕಾರದ ಹಿಂಸಾಕೃತ್ಯ

ರಾಯ್‍ಪುರ್, ಮಾ.6-ತೆಲಂಗಾಣದ ಭದ್ರಾದ್ರಿ ಅರಣ್ಯ ಪ್ರದೇಶದಲ್ಲಿ ಪೆÇಲೀಸ್ ಎನ್‍ಕೌಂಟರ್‍ನಲ್ಲಿ 12 ನಕ್ಸಲರು ಬಲಿಯಾದ ಘಟನೆಗೆ ಮಾವೋವಾದಿಗಳು ಛತ್ತೀಸ್‍ಗಢದಲ್ಲಿ ಪ್ರತೀಕಾರದ ಹಿಂಸಾಕೃತ್ಯಗಳನ್ನು ನಡೆಸಿದ್ದಾರೆ.
ನಕ್ಸಲರ ದಾಳಿಯಲ್ಲಿ ಪೆÇಲೀಸ್ ಮಾಜಿ ಪೇದೆಯೊಬ್ಬರು ಹುತಾತ್ಮನಾಗಿದ್ದು, ಮೂರು ಸರ್ಕಾರಿ ಬಸ್‍ಗಳೂ ಸೇರಿದಂತೆ ಆರು ವಾಹನಗಳು ಬೆಂಕಿಗಾಹುತಿಯಾಗಿವೆ.
ಛತ್ತೀಸ್‍ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಕತ್ತಿ ಪ್ರದೇಶದಲ್ಲಿ ನಿನ್ನೆ ತಡ ರಾತ್ರಿ ದಾಳಿ ನಡೆಸಿದ ನಕ್ಸಲರು ಪೇದೆಯೊಬ್ಬರನ್ನು ಗುಂಡುಹಾರಿಸಿ ಕೊಂದಿದ್ದಾರೆ. ನಂತರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮೂರು ಬಸ್‍ಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಅಲ್ಲದೇ ನಕ್ಸಲರು ಅಟ್ಟಹಾಸಕ್ಕೆ ಮೂರು ಖಾಸಗಿ ಲಾರಿಗಳೂ ಆಗ್ನಿಗಾಹುತಿಯಾಗಿವೆ.
ಈ ದಾಳಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಅಪಾಯವಾಗಿಲ್ಲ. ಅವರು ಆರ್‍ಪಿಎಫ್ ತಂಗುದಾಣದಲ್ಲಿ ಸುರಕ್ಷಿತವಾಗಿದ್ದಾರೆ.
ಕೃತ್ಯ ಎಸಗಿದ ನಂತರ ನಕ್ಸಲರು ಇದು ತೆಲಂಗಾಣದ ಪೆÇಲೀಸ್ ಎನ್‍ಕೌಂಟರ್‍ಗೆ ಪ್ರತೀಕಾರ ಎಂದು ಘೋಷಣೆ ಕೂಗಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ