ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಚನ್ನಪಟ್ಟಣ, ಮಾ.6- ಆಕಸ್ಮಿಕ ಬೆಂಕಿ ತಗುಲಿ 1.25 ಲಕ್ಷ ನಗದು, ನಾಲ್ಕು ಮೇಕೆಗಳು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದೇಗೌಡರ ಮಗ ಗೋವಿಂದೇಗೌಡರಿಗೆ ಸೇರಿದ ಗುಡಿಸಲು ಮನೆಯೇ ಬೆಂಕಿ ಕೆನ್ನಾಲಿಗೆ ಭಸ್ಮವಾಗಿದ್ದು, ಬೆಂಕಿ ಕಾಣಸಿಕೊಂಡ ಕ್ಷಣಾರ್ಧದಲ್ಲೇ ಬೆಂಕಿ ಸಂಪೂರ್ಣವಾಗಿ ಗುಡಿಸಲನ್ನು ಸುಟ್ಟು ಭಸ್ಮ ಮಾಡಿದೆ.
ಈ ಘಟನೆಯಲ್ಲಿ ಗುಡಿಸಲಿನಲ್ಲಿದ್ದ ನಾಲ್ಕು ಮೇಕೆಗಳು ಸಜೀವ ದಹನವಾಗಿವೆ. ಜೊತೆಗೆ ಮನೆ ನಿರ್ಮಾಣಕ್ಕಾಗಿ ಕೂಡಿಟ್ಟಿದ್ದ 1.25 ಲಕ್ಷ ರೂ ನಗದು ಸಹ ಇಟ್ಟಲ್ಲಿಯೇ ಬೂದಿಯಾಗಿದ್ದು, ಮನೆಯಲ್ಲಿದ್ದ ಆಹಾರ ಪದಾರ್ಥಗಳು ಸೇರಿದಂತೆ ಬಟ್ಟೆಗಳು ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಗೋವಿಂದೇಗೌಡ ಗ್ರಾಮದಲ್ಲೇ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ತಾತ್ಕಾಲಿಕವಾಗಿ ಸಂಸಾರದ ವಾಸಕ್ಕೆ ಗುಡಿಸಲು ನಿರ್ಮಿಸಿಕೊಂಡಿದ್ದನು ಎನ್ನಲಾಗಿದೆ. ಹೊಸಮನೆಯ ನಿರ್ಮಾಣದ ಕನಸೊತ್ತಿದ್ದ ಗೋವಿಂದೇಗೌಡ ಸಾಲಸೋಲ ಮಾಡಿ ತಂದಿದ್ದ 1.25ಲಕ್ಷ ರೂ. ಹಣ, ದವಸದಾನ್ಯಕೆÉ್ಕಆಕಸ್ಮಿಕ ಬೆಂಕಿ ಬಿದ್ದಿದ್ದು ಆಘಾತ ಉಂಟು ಮಾಡಿದೆ.
ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಮುಂದಾದರೂ ಬೆಂಕಿಯ ಆರ್ಭಟಕ್ಕೆ ಗುಡಿಸಲು ಸಂಪೂರ್ಣ ಭಸ್ಮವಾಯಿತು.
ಘಟನೆ ಸಂಬಂಧ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ