ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ವಿಜಯ್ ಸಂಕೇಶ್ವರ್ ಮತ್ತು ರಾಜೀವ್ ಚಂದ್ರಶೇಖರ್ ಹೆಸರು ಅಂತಿಮ
ಬೆಂಗಳೂರು,ಮಾ.5- ಮಾರ್ಚ್ 23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಇಬ್ಬರ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಅಂತಿಮಗೊಳಿಸಿದೆ.
ವಿಜಯ್ ಸಂಕೇಶ್ವರ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಹೆಸರುಗಳನ್ನು ಬಿಜೆಪಿ ಕೋರ್ ಕಮಿಟಿ ಸಭೆ ಅಂತಿಮಗೊಳಿಸಿದ್ದು, ಒಬ್ಬರನ್ನ ಆಯ್ಕೆಮಾಡುವ ಸಾಮಥ್ರ್ಯ ಮಾತ್ರ ಬಿಜೆಪಿಗಿದ್ದು, ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುನ ನಿರ್ಧಾರವನ್ನು ಅಮಿತ್ ಶಾಗೆ ಬಿಡಲಾಗಿದೆ.
ರಾಜ್ಯಸಭೆ ಆಯ್ಕೆಗೆ ಆಕಾಂಕ್ಷಿಗಳಾಗಿರುವ ರಾಜೀವ್ ಚಂದ್ರಶೇಖರ್, ಕೆ. ಮುರುಳೀಧರ್ ರಾವ್, ವಿಜಯ್ ಸಂಕೇಶ್ವರ್, ಡಾ. ಎಂ. ನಾಗರಾಜ್ ಕುರಿತು ಚರ್ಚೆ ನಡೆಸಲಾಗಿದೆಯಾದರೂ ರಾಜೀವ್ ಚಂದ್ರಶೇಖರ್ ಹಾಗೂ ವಿಜಯ್ ಸಂಕೇಶ್ವರ್ ಹೆಸರು ಅಂತಿಮಗೊಳಿಸಲಾಗಿದೆ.
ಮಾರ್ಚ್ 15ರೊಳಗೆ ರಾಜಸಭಾ ಚುನಾವಣೆಗೆ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ಈ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಇದೇ ಮಾರ್ಚ್ 23ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನ ಕೆ. ರೆಹಮಾನ್ ಖಾನ್, ಬಿಜೆಪಿಯ ಬಸವರಾಜ್ ಪಾಟೀಲ್ ಸೇಡಂ, ರಾಮಕೃಷ್ಣ ಮತ್ತು ರಾಜೀವ್ ಚಂದ್ರಶೇಖರ್ ಅವರ 6 ವರ್ಷದ ಸದಸ್ಯತ್ವದ ಅವಧಿ ಏಪ್ರಿಲ್ 2ಕ್ಕೆ ಮುಗಿಯಲಿದೆ. ಹೀಗಾಗಿ ಈ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ 3 ಸ್ಥಾನ ಮತ್ತು ಬಿಜೆಪಿ 1 ಸ್ಥಾನ ಗೆಲ್ಲುವ ಸಾಮಥ್ರ್ಯ ಹೊಂದಿವೆ. ಜೆಡಿಎಸ್ ಬಲ ಕುಸಿದಿರುವುದರಿಂದ ಯಾವುದೇ ಸ್ಥಾನ ದೊರಕುವ ಸಂಭವವಿಲ್ಲ