ಬೆಂಗಳೂರು, ಮಾ.5-ನಗರದ ಎರಡು ಕಡೆ ಕಳ್ಳರು ಹಾಡಹಗಲೇ ಮನೆಗಳ ಬೀಗ ಮುರಿದು ಒಳನುಗ್ಗಿ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಕಾಮಾಕ್ಷಿಪಾಳ್ಯ: ಕಾರ್ಖಾನೆಯೊಂದರ ಎಂಜಿನಿಯರಿಂಗ್ ಮನೆಗೆ ಹಾಡಹಗಲೇ ನುಗ್ಗಿದ ಚೋರರು 30 ಸಾವಿರ ಹಣ ಹಾಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.
ನಾಗವಾರದ ಮೊದಲನೆ ಬ್ಲಾಕ್, ಮೊದಲಬನೆ ಎ ಮುಖ್ಯರಸ್ತೆಯಲ್ಲಿ ಅರುಣಾಚಲ ಎಂಬುವರು ವಾಸವಾಗಿದ್ದು, ಇವರು ಕಾರ್ಖಾನೆಯೊಂದರಲ್ಲಿ ನೌಕರರಾಗಿದ್ದಾರೆ.
ನಿನ್ನೆ ಮಧ್ಯಾಹ್ನ 12.30ಕ್ಕೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದಾಗ ಕಳ್ಳರು ಇವರ ಹಣ, 20 ಬಳೆಗಳು, 5 ಬ್ರೇಸ್ಲೆಟ್, 2 ಗೋಲ್ಡ್ ವಾಚು, 12 ನೆಕ್ಲೇಸ್, 10 ಉಂಗುರ ಹಾಗೂ 6 ಸರಗಳನ್ನು ಕದ್ದೊಯ್ದಿದ್ದಾರೆ.
ಸಂಜೆ 5 ಗಂಟೆಗೆ ಅರುಣಾಚಲ ಅವರು ಮನೆಗೆ ವಾಪಾಸಾದಾಗ ಕಳ್ಳತನ ನಡೆದಿರುವುದು ಕಂಡು ತಕ್ಷಣ ಕಾಮಾಕ್ಷಿಪಾಳ್ಯ ಪೆÇಲೀಸರಿಗೆ ತಿಳಿಸಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೆÇಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.
ವಿದ್ಯಾರಣ್ಯಪುರ :ಎಚ್.ಎಂ.ಟಿ ಲೇಔಟ್ನ 5ನೇ ಬ್ಲಾಕ್, 19ನೇ ಕ್ರಾಸ್ನ ನಿವಾಸಿ ಜ್ಯೋತಿ ಎಂಬುವರ ಮನೆ ಬೀಗ ಒಡೆದು ಒಳನುಗ್ಗಿದ ಚೋರರು 100 ಗ್ರಾಮ ಆಭರಣ ಕಳ್ಳತನ ನಡೆಸಿದ್ದಾರೆ.
ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7ರ ಮಧ್ಯೆ ಈ ಕಳ್ಳತನ ನಡೆದಿದೆ.
ಸ್ಥಳಕ್ಕಾಗಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.