ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ 72 ಲಕ್ಷ ರೂ.ಗೆ ಹರಾಜ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ ದಾಖಲೆ ಮೊತ್ತ ಬರೋಬ್ಬರಿ 72 ಲಕ್ಷ ರೂಪಾಯಿಗೆ ಸೋಮವಾರ ಹರಾಜು ಆಗಿದೆ.

ಬೆಂಗಳೂರು ಮೂಲದ ಉದ್ಯಮಿ ಮುಖೇಶ್ ಎಂಬುವರು ಬಾವುಟ ಖರೀದಿಸಿದ್ದಾರೆ. ಮುಕ್ತಿ ಬಾವುಟ ಪಡೆದರೆ ಭವಿಷ್ಯ ಹಸನಾಗುತ್ತದೆ ಎಂಬ ಪ್ರತೀತಿ ಇದೆ. ಕಳೆದ ವರ್ಷ 71 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಕಳೆದ ಎರಡು ವರ್ಷ ಬೆಂಗಳೂರಿನ ಉದ್ಯಮಿ ಸೋಮಣ್ಣ ಬಾವುಟ ಪಡೆದಿದ್ದರು.

ಈ ಬಾರಿ ಮುಖೇಶ್ ಮತ್ತು ಹಿರಿಯೂರು ಶಾಸಕ ಸುಧಾಕರ್‌ ಮಧ್ಯೆ ಮುಕ್ತಿ ಭಾವುಟಕ್ಕಾಗಿ ಪೈಪೋಟಿ ನಡೆಯಿತು.  ಪ್ರತಿ ವರ್ಷ ನಡೆಯುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ವೇಳೆ ನಡೆಯುವ ರಥೋತ್ಸವ ಸಂದರ್ಭದಲ್ಲಿ ಬಾವುಟ ಹರಾಜು ಹಾಕಲಾಗುವುದು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ