ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ

ಬೆಂಗಳೂರು: ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ನಾಳೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಜೆಪಿಗೆ ಸೇರ್ಪಡೆಯಾಗಿ ಆರ್‌ಆರ್ ನಗರ, ಚಾಮರಾಜಪೇಟೆ, ಮಲ್ಲೇಶ್ವರಂ ಅಥವಾ ಅವರ ಹುಟ್ಟೂರು ಕುಂದಾಪುರದಿಂದ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಚಾಮರಾಜಪೇಟೆ ಅವರಿಗೆ ಚಿತ್ರಜೀವನ ಕಟ್ಟಿಕೊಟ್ಟ ಸ್ಥಳ ಹಾಗೂ ಬ್ರಾಹ್ಮಣ ಮತದಾರರುಹೆಚ್ಚಿಗೆ ಇದ್ದಾರೆ. ಇದನ್ನು ಯೋಚಿಸಿ ಅತ್ತ ಕಡೆ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ. ಕುಂದಾಪುರ ಅವರ ಜನ್ಮಸ್ಥಾನ ಇಲ್ಲೂ ಅವರ ಉಮೇದುವಾರಿಕೆ ಅಲ್ಲಗೆಳೆಯುವಂತಿಲ್ಲ.

ಕೆಪಿಜೆಪಿ ಮಹೇಶ್ ಗೌಡ ಎಂಬುವರು ಸ್ಥಾಪಿಸಿದ ಪಕ್ಷವಾಗಿದ್ದು, ಇದಕ್ಕೆ ಉಪೇಂದ್ರ ರಾಜ್ಯಾಧ್ಯಕ್ಷರಾಗಿದ್ದರು. ಆದರೆ, ಟಿಕೆಟ್ ಹಂಚಿಕೆಯ ಸ್ವಾತಂತ್ರ್ಯ ಉಪ್ಪಿಗೆ ದೊರೆತಿರಲಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಪಕ್ಷವೂ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡದಿರುವುದು ಉಪೇಂದ್ರ ಹೊರಬರಲು ಕಾರಣ ಎಂಬ ಮಾತು ಚಾಲ್ತಿಯಲ್ಲಿದೆ.

ಗಿಮಿಕ್: ಉಪೇಂದ್ರ ಸಾಮಾನ್ಯವಾಗಿ ತಮ್ಮ ಚಿತ್ರ ಬಿಡುಗಡೆ ಹೊತ್ತಿಗೆ ಒಂದಿಲ್ಲೊಂದು ರೀತಿಯಲ್ಲಿ ಗಿಮಿಕ್ ಮಾಡುತ್ತಾರೆ. ಅವರದ್ದೇ ಉಪೇಂದ್ರ ಚಿತ್ರ ಬಿಡುಗಡೆ ಹೊತ್ತಿಗೆ, ಉಪೇಂದ್ರ ಅಪಹರಣ , ಬಿಡುಗಡೆ ಎಂಬ ಗಿಮಿಕ್ ಮಾಡಿದ್ದರು. ಇಲ್ಲೂ ಅದೇ ಆಗುತ್ತದಾ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ