ನವದೆಹಲಿ/ಮುಂಬೈ, ಮಾ.5- ಅಕ್ರಮ ಹಣ ರವಾಣೆ ಪ್ರಕರಣದ ಸಂಬಂಧ ಈಗಾಗಲೇ ಬಂಧಿತರಾಗಿರುವ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಹಾಗೂ ಉದ್ಯಮಿ ಕಾರ್ತಿ ಚಿದಂಬರಂಗೆ ಮತ್ತೊಂದು ಕಂಟಕ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಹಿರಿಯ ರಾಜಕೀಯ ಮುಖಂಡರೊಬ್ಬರಿಗೆ 1.8 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವ ಪ್ರಕರಣದ ಸಂಬಂಧ ಜಾರಿನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
2006 ಮತ್ತು 2009ರಲ್ಲಿ ಎರಡು ಕಂತುಗಳ ಮೂಲಕ ಚೆನ್ನೈನಲ್ಲಿರುವ ರಾಯನ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಶಾಖೆಯ ತಮ್ಮ ಖಾತೆಯಿಂದ ಕಾರ್ತಿ ಈ ಹಣವನ್ನು ರವಾನೆ ಮಾಡಿದ್ದಾರೆ. ಇದೊಂದು ಅಕ್ರಮ ಅವ್ಯವಹಾರವಾಗಿದ್ದು, ಈ ಬಗ್ಗೆ ಕಾರ್ತಿ ಅವರನ್ನು ಅಧಿಕಾರಿಗಳು ಕೂಲಕಂಷವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಕಾರ್ತಿ ಮುಂಬೈನ ಯರವಾಡ ಜೈಲಿನಲ್ಲಿದ್ದಾರೆ.