ಪೋಲಿಸರಿಗೆ ಸಿಕ್ಕಿ ಬೀಳುವ ಭೀತಿಗೆ ಕದ್ದ ಪಂಚಲೋಹ ವಿಗ್ರಹಗಳನ್ನು ಮೂಟೆ ಕಟ್ಟೆ ಜಮೀನಿನ ಬಳಿ ಎಸೆದು ಪರಾರಿಯಾದ ಕಳ್ಳರು

ಪೋಲಿಸರಿಗೆ ಸಿಕ್ಕಿ ಬೀಳುವ ಭೀತಿಗೆ ಕದ್ದ ಪಂಚಲೋಹ ವಿಗ್ರಹಗಳನ್ನು ಮೂಟೆ ಕಟ್ಟೆ ಜಮೀನಿನ ಬಳಿ ಎಸೆದು ಪರಾರಿಯಾದ ಕಳ್ಳರು
ಕನಕಪುರ, ಮಾ.4- ಚೆಕ್‍ಪೆÇೀಸ್ಟ್ ಬಳಿ ಪೆÇಲೀಸರಿಗೆ ಸಿಕ್ಕಿ ಬೀಳುವ ಆತಂಕದಿಂದ ಕಳ್ಳತನ ಮಾಡಿದ್ದ ಪಂಚಲೋಹ ವಿಗ್ರಹಗಳನ್ನು ಕಳ್ಳರು ಮೂಟೆ ಕಟ್ಟೆ ಜಮೀನಿನ ಬಳಿ ಎಸೆದು ಪರಾರಿಯಾಗಿರುವ ಘಟನೆ ಸಾತನೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಭೂವಳ್ಳಿ ಗ್ರಾಮದ ಜಮೀನಿನ ಮಾಲೀಕ ಉಮೇಶ್ ಅವರಿಗೆ ಈ ವಿಗ್ರಹಗಳಿದ್ದ ಮೂಟೆ ದೊರೆತಿದ್ದು , ಅದನ್ನು ಸಾತನೂರು ಪೆÇಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಳ್ಳರು ಬೇರೆ ಕಡೆ ಪಂಚಲೋಹ ವಿಗ್ರಹಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದಾಗ ಫಾರೆಸ್ಟ್ ಚೆಕ್‍ಪೆÇೀಸ್ಟ್‍ನಲ್ಲಿ ತಪಾಸಣೆ ನಡೆಯುತ್ತಿರುವುದನ್ನು ಗಮನಿಸಿ ತಾವು ಸಿಕ್ಕಿ ಬೀಳಬಹುದೆಂಬ ಆತಂಕದಿಂದ ಕಳ್ಳರು ವಿಗ್ರಹಗಳನ್ನೆಲ್ಲಾ ಮೂಟೆ ಕಟ್ಟಿ ಜಮೀನಿನಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.
ಜಮೀನಿನ ಮಾಲೀಕ ಉಮೇಶ್ ಮೂಟೆಯನ್ನು ಗಮನಿಸಿ ಬಿಚ್ಚಿ ನೋಡಿದಾಗ ಅದರಲ್ಲಿದ್ದ ಪಂಚಲೋಹ ವಿಗ್ರಹಗಳಿರುವುದನ್ನು ಗಮನಿಸಿ ಪೆÇಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ