ಶಿಕ್ಷಕಿ ಮನೆ ಬೀಗ ಒಡೆದು ಕಳ್ಳತನ
ಬೆಂಗಳೂರು, ಮಾ.4- ಶಿಕ್ಷಕಿಯೊಬ್ಬರ ಮನೆ ಬೀಗ ಒಡೆದು 30 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಸಿಕೆ ಅಚ್ಚುಕಟ್ಟು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗಮ್ಮ ದೇವಾಲಯ ಸಮೀಪದ 9ನೆ ಕ್ರಾಸ್ ನಿವಾಸಿ ಲಲಿತಾ ಎಂಬುವವರು ಶಿಕ್ಷಕಿಯಾಗಿದ್ದು, ನಿನ್ನೆ ಬೆಳಗ್ಗೆ ಎಂದಿನಂತೆ ಶಾಲೆಗೆ ತೆರಳಿದ್ದಾಗ ಕಳ್ಳರು ಇವರ ಮನೆ ಬೀಗ ಮುರಿದು ಒಳನುಗ್ಗಿ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಮನೆಗಳ್ಳತನ: ಭುವನೇಶ್ವರಿನಗರದ 11ನೆ ಕ್ರಾಸ್, ಆರ್‍ಟಿ ನಗರ ನಿವಾಸಿ ಮೊಹಮ್ಮದ್ ಅಲಿ ಎಂಬುವವರು ಹೊರಗೆ ತೆರಳಿದ್ದಾಗ ಕಳ್ಳರು ಇವರ ಮನೆಯ ಬೀಗ ಒಡೆದು 1 ಲಕ್ಷ ಹಣ ಕದ್ದೊಯ್ದಿರುವ ಘಟನೆ ಹೆಬ್ಬಾಳ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೊನ್ನೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದ ಇವರು ನಿನ್ನೆ ಬೆಳಗ್ಗೆ 8.30ರಲ್ಲಿ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಪರ್ಸ್ ಕಳ್ಳತನ: ಜೆಪಿ ನಗರದ ನೃಪತುಂಗ ನಗರ, 4ನೆ ಮುಖ್ಯರಸ್ತೆ, 5ನೆ ಕ್ರಾಸ್ ನಿವಾಸಿ ಲಿಸಿತ್ ದೇವ್ ಎಂಬುವವರ ಮನೆಯ ಕಿಟಕಿ ಮೂಲಕ ಕೈ ತೂರಿಸಿದ ಕಳ್ಳ 1500ರೂ. ಹಣವಿದ್ದ ಪರ್ಸ್ ಅಪಹರಿಸಿರುವ ಘಟನೆ ಪುಟ್ಟೇನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.