ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಸರ್ಕಾರ ರಚಿಸಲು ರಣತಂತ್ರ

ನವದೆಹಲಿ,ಮಾ.4-ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಸರ್ಕಾರ ರಚಿಸಲು ರಣತಂತ್ರ ರೂಪಿಸಿದೆ.
ನಾಗಾಲ್ಯಾಂಡ್‍ನಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಎನ್‍ಡಿಪಿಪಿಗೆ ಬಿಜೆಪಿ ಬೆಂಬಲನೀಡಲು ತೀರ್ಮಾನಿಸಿದೆ. 60 ಸದಸ್ಯರ ಬಲದಲ್ಲಿ ಎನ್‍ಡಿಪಿಪಿ 17, ಬಿಜೆಪಿ 12, ಎನ್‍ಪಿಪಿ 2 ಹಾಗೂ ಜೆಡಿಯು 1, ಪಕ್ಷೇತರ ಅಭ್ಯರ್ಥಿಯೊಬ್ಬರು ಬೆಂಬಲ ನೀಡಲು ಮುಂದೆ ಬಂದಿದ್ದಾರೆ.
ಬಿಜೆಪಿ ಮೈತ್ರಿ ಕೂಟಕ್ಕೆ 32 ಸದಸ್ಯರ ಬೆಂಬಲ ಸಿಕ್ಕಿದ್ದು , ಸರಳ ಬಹುಮತದ ಮೂಲಕ ಸರ್ಕಾರ ರಚಿಸಲು ಯಾವುದೇ ಸಮಸ್ಯೆ ಅಡ್ಡಿಯಾಗಿಲ್ಲ. ಸರ್ಕಾರ ರಚನೆಗೆ 31 ಸದಸ್ಯರ ಬೆಂಬಲದ ಅಗತ್ಯವಿದೆ.
ಈಗಾಗಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಾದ ಪದ್ಮನಾಭ ಆಚಾರ್ಯ ಅವರನ್ನು ಸೋಮವಾರ ಭೇಟಿಯಾಗುವ ಸಂಭವವಿದೆ. ಎನ್‍ಡಿಪಿಪಿ ಮುಖಂಡ ನಿಫಿಯೋ ರಿಯೋ ಮುಖ್ಯಮಂತ್ರಿಯಾಗುವ ಸಂಭವವಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಿಂದ ದೂರ ಇಡಲೇಬೆಕೆಂದು ತೀರ್ಮಾನಿಸಿರುವ ಬಿಜೆಪಿ ಮೈತ್ರಿ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲಿದೆ ತನಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಅಂಗ ಪಕ್ಷಗಳಿಗೆ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವ ಒಪ್ಪಂದಕ್ಕೆ ಬರಲಾಗಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬುಧವಾರ ನಾಗಾಲ್ಯಾಂಡ್‍ನಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ.
ಮುಂದುವರೆದ ಕಸರತ್ತು:  ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಯಾವುದೆ ಪಕ್ಷಕ್ಕೂ ಇಲ್ಲಿ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ರಚನೆ ಮಾಡುವ ಮೂಲಕ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಅವಿರತ ಪ್ರಯತ್ನ ಮುಂದುವರೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ