ಸರ್ವೀಸ್ ರಸ್ತೆ ಬಿಟ್ಟು ಫ್ಲೈ ಓವರ್ ಮೇಲೆ ಬಸ್ ಚಾಲನೆ: ಸ್ಥಳೀಯರಿಂದ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹಾರ ಹಾಕಿ ಪಾದಪೂಜೆ ಮಾಧಿ ವಿನೂತನ ಪ್ರತಿಭಟನೆ
ನೆಲಮಂಗಲ,ಮಾ.4- ಸರ್ವೀಸ್ ರಸ್ತೆ ಬಿಟ್ಟು ಫ್ಲೈ ಓವರ್ ಮೇಲೆ ಬಸ್ ಸಂಚರಿಸುತ್ತಿರುವುದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಬಸ್ ಅಡ್ಡಗಟ್ಟಿ ಚಾಲಕ ಹಾಗೂ ನಿರ್ವಾಹಕರಿಗೆ ಹಾರ ಹಾಕಿ ಪಾದಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಸರ್ವೀಸ್ ರಸ್ತೆ ಬಿಟ್ಟು ಫ್ಲೈ ಓವರ್ ಮೇಲೆ ಸಂಚರಿಸುತ್ತಿರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಹಲವಾರು ಬಾರಿ ಈ ಬಗ್ಗೆ ಮನವಿ ಮಾಡಿದ್ದರೂ ಸಹ ಬಸ್ ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯರು ಆಕ್ರೋಶಗೊಂಡಿದ್ದರು.
ಇಂದು ಬೆಳಗ್ಗೆ ಒಟ್ಟಾಗಿ ಸೇರಿದ ಸ್ಥಳೀಯರು ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಅನ್ನು ತಡೆದು ಚಾಲಕ-ನಿರ್ವಾಹಕರನ್ನು ಕೆಳಗಿಳಿಸಿ ಹಾರ ಹಾಕಿ ಪಾದಪೂಜೆ ಮಾಡುವ ಮೂಲಕ ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚರಿಸಲು ಮನವಿ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾದರು.
ಈ ವೇಳೆ ಮುಜುಗರಕ್ಕೀಡಾದ ಚಾಲಕ ಹಾಗೂ ನಿರ್ವಾಹಕರು ಸ್ಥಳದಿಂದ ಪರಾರಿಯಾದರು.