ಈಶಾನ್ಯ ಭಾರತದ ನಾಗಾಲ್ಯಾಂಡ್ ವಿಧಾನಸಭೆ ಈ ಬಾರಿಯು ಪುರುಷ ಪ್ರಧಾನ

ಕೊಹಿಮಾ, ಮಾ.4-ಈಶಾನ್ಯ ಭಾರತದ ನಾಗಾಲ್ಯಾಂಡ್ ವಿಧಾನಸಭೆ ಈ ಬಾರಿಯು ಪುರುಷ ಪ್ರಧಾನವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಐವರು ಮಹಿಳೆಯರು ಪರಾಭವಗೊಂಡಿದ್ದಾರೆ. ಇವರಲ್ಲಿ ಒಬ್ಬಾಕೆ ಕೇವಲ 17 ಮತಗಳನ್ನು ಗಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯವಿರುವ ನಾಗಾಲ್ಯಾಂಡ್‍ನಲ್ಲಿ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯು ಹೆಣಗುವುದು ಕಷ್ಟಕರವಾಗಿದೆ. ಈ ರಾಜ್ಯ ರಚನೆಯಾದ 1963ರಿಂದಲೂ ಏಕೈಕ ಮಹಿಳೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸದೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಚುನಾವಣೆಯಲ್ಲಿ ನ್ಯಾಷನಲ್ ಡೆಮೊಕ್ರಾಟಿಕ್ ಪೆÇ್ರಗ್ರೆಸ್ಸಿವ್ ಪಾರ್ಟಿ(ಎನ್‍ಡಿಪಿಪಿ) ಅಭ್ಯರ್ಥಿಯಾಗಿ ಅಬೋಯ್ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿದ್ದ ಅವಾನ್ ಕೊನ್‍ಯೊಕ್ 5,131 ಮತಗಳನ್ನು ಗಳಿಸಿದ್ದು ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಇವರು ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಪಿ) ಹುರಿಯಾಳು ಎಶಾಕ್ ಕೊನ್‍ಯಾಕ್ ಅವರಿಗೆ ಪ್ರಬಲ ಸ್ಫರ್ಧೆ ನೀಡಿದ್ದರೂ ಗೆಲುವು ಸಾಧಿಸಿಲ್ಲ.
ನಾಗಾಲ್ಯಾಂಡ್ ರಾಜಕೀಯ ಇತಿಹಾಸದಲ್ಲಿ ಐವರು ಮಹಿಳೆಯರು ಅಖಾಡಕ್ಕೆ ಇಳಿದಿದ್ದು ಇದೇ ಮೊದಲು. 2013ರ ಚುನಾವಣೆಯಲ್ಲಿ ಕೇವಲ ಇಬ್ಬರು ಮಹಿಳೆಯರು ಸ್ಫರ್ಧಿಸಿ ಠೇವಣಿ ಕಳೆದುಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ