ಬೆಂಗಳೂರು, ಮಾ.4- ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಮೂವರು ನೌಕರರನ್ನು ಅಡ್ಡಗಟ್ಟಿದ ದರೋಡೆಕೋರರು ಇಬ್ಬರಿಗೆ ಚಾಕುವಿನಿಂದ ಇರಿದು 2 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸುದ್ದಗುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಂಜಾಬ್ ರೆಸ್ಟೋರೆಂಟ್ ನೌಕರರಾದ ಅಮೀರ್, ಬಿರ್ಜಿತ್ ಸರ್ಕಾರ್, ಮತ್ತೊಬ್ಬರು ಕೆಲಸ ಮುಗಿಸಿಕೊಂಡು ಇಂದು ಬೆಳಗಿನ ಜಾವ ಒಂದು ಗಂಟೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಮೂವರು ದರೋಡೆಕೋರರು ಇವರನ್ನು ಹಿಂಬಾಲಿಸಿ ಬಂದು ಅಡ್ಡಗಟ್ಟಿ ಚಾಕುವಿನಿಂದ ಬಿರ್ಜಿತ್ ಮತ್ತು ಅಮೀರ್ಗೆ ಇರಿದು 2 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.