![07bgnag.Revanna_GI92C732I.1+bgnews_hd_revanna](http://kannada.vartamitra.com/wp-content/uploads/2018/03/07bgnag.Revanna_GI92C732I.1bgnews_hd_revanna-300x381.jpg)
ಎಚ್.ಡಿ.ರೇವಣ್ಣ ಪುತ್ರ ಡಾ.ಸೂರಜ್ರೇವಣ್ಣ ಮತ್ತು ನ್ಯಾ.ಹುಳುವಾಡಿ ಬಿ. ರಮೇಶ್ ಪುತ್ರಿ ಸಾಗರಿಕ ರಮೇಶ್ ವಿವಾಹ ಮಹೋತ್ಸವ
ಬೆಂಗಳೂರು, ಮಾ.4-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್ರೇವಣ್ಣ ಮತ್ತು ನ್ಯಾಯಮೂರ್ತಿ ಹುಳುವಾಡಿ ಬಿ. ರಮೇಶ್ ಅವರ ಪುತ್ರಿ ಸಾಗರಿಕ ರಮೇಶ್ ಅವರ ವಿವಾಹ ಮಹೋತ್ಸವ ಸಂಭ್ರಮ ಸಡಗರದಿಂದ ಬೆಂಗಳೂರಿನ ಅರಮನೆಯಲ್ಲಿ ನಡೆಯಿತು.
ಇಂದು ಬೆಳಿಗ್ಗೆ ಅರಮನೆಯಲ್ಲಿ ನಡೆದ ವಿವಾಹದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪತ್ನಿ ಚೆನ್ನಮ್ಮ ಸೇರಿದಂತೆ ಗೌಡರ ಕುಟುಂಬವರ್ಗದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರು.
ಪಕ್ಷಾತೀತವಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಜೆಡಿಎಸ್ನ ಮುಖಂಡರು, ಬಂಧುಗಳು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ವಧು-ವರರಿಗೆ ಶುಭ ಕೋರಿದರು.