ಮಾ: 6ರಂದು ಶ್ರೀ ಕೆ.ಎಸ್.ಈಶ್ವರಪ್ಪ ಬೀದರಗೆ
ಬೀದರ್: ಮಾ: 06-03-2018ರಂದು ಕರ್ನಾಟಕ ಸರಕಾರದ ವಿಧಾನ ಪರಿಷತಿನ ವಿರೋಧ ಪಕ್ಷದ ನಾಯಕರಾದ ಹಾಗೂ ಮಾಜಿ ಉಪ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ಬೀದರಗೆ ಆಗಮಿಸಲಿದ್ದಾರೆ, ಅಂದು ಬೆಳಗ್ಗೆ 10:30ಗಂಟೆಗೆ ನಗರದಲ್ಲಿರುವ ಪಕ್ಷದ ಜಿಲ್ಲಾ ಬಿ.ಜೆ.ಪಿ ಕಾರ್ಯಲಯದಲ್ಲಿ ದಿನಾಂಕ: 10-03-2018ರಂದು ಸುಕ್ಷೇತ್ರ ಕೂಡಲಸಂಗಮದಲ್ಲಿ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲಿದ್ದು ಅದರ ಪ್ರಯುಕ್ತ ಬೀದರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಅದರ ಪೂರ್ವಭಾವಿ ಸಿದ್ದತಾ ಸಭೆ ನಡೆಸುವವರು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷರಾದ ಡಾ.ಶೈಲೇಂದ್ರ ಬೆಲ್ದಾಳೆ ರವರು ವಹಿಸುವರು ಸಭೆಯಲ್ಲಿ ಜಿಲ್ಲೆಯ ಜನಪ್ರಿಯ ಸಂಸದರಾದ ಶ್ರೀ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರು ಹಾಗೂ ವಿಭಾಗ ಪ್ರಭಾರಿಗಳಾದ ಶ್ರೀ ರಘುನಾಥರಾವ ಮಲ್ಕಾಪೂರೆ, ಔರಾದ ಶಾಸಕರಾದ ಶ್ರೀ ಪ್ರಭು ಚೌವ್ಹಾಣ, ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರು, ರಾಜೆಂದ್ರ ವರ್ಮಾ, ಬಸವರಾಜ ಪಾಟೀಲ ಅಟ್ಟೂರ, ಎಂ.ಜಿ.ಮೂಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಾಬುರಾವ ಕಾರಬಾರಿ, ಈಶ್ವರಸಿಂಗ್ ಠಾಕೂರ, ಸೋಮನಾಥ ಪಾಟೀಲ್, ಜಯಕುಮಾರ ಕಾಂಗೆ ಉಪಸ್ಥಿತರಿರುವರು.
ಆದಕಾರಣ ಜಿಲ್ಲಾ ಪದಾಧಿಕಾರಿಗಳು ವಿವಿಧ ಮಂಡಲದ ಪದಾಧಿಕಾರಿಗಳು ರಾಜ್ಯ ಹಾಗೂ ಜಿಲ್ಲಾ ಮೋರ್ಚಾದ ಪದಾಧಿಕಾರಿಗಳು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳು ಮತ್ತು ಇನ್ನಿತರ ಚುನಾಯಿತ ಪ್ರತಿನಿಧಿಗಳು ಕಾರ್ಯಕತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೇ ಮತ್ತು ಸೂಚನೆಗಳು ನೀಡಿ ಸಭೆ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.