ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ

ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ

ಬೀದರ, ಮಾ:4 ತಾಲೂಕಿನ ಜನವಾಡಾದಲ್ಲಿರುವ ಗುರುದ್ವಾರಾ ಮಾತಾ ಭಾಗ್‍ಕೌರಜೀಯವರ ನವೀಕರಣಗೊಂಡ ಗುರುದ್ವಾರಾವನ್ನು ಶಾಸ್ತ್ರೋಕ್ತವಾಗಿ ಭಾನುವಾರ ಉದ್ಘಾಟಿಸಿ ಬೀದರಿನ ಗುರುದ್ವಾರಾ ಪ್ರಬಂಧಕ ಕಮಿಟಿಗೆ ಹಸ್ತಾಂತರಿಸಲಾಯಿತು.

ಸಂತ ಬಾವಾ ನರೇಂದ್ರಸಿಂಗ್‍ಜೀ ಮತ್ತು ಬಲವೀಂದ್ರಸಿಂಗ್‍ಜೀ ಅವರು ಈ ಗುರುದ್ವಾರಾದ ನವೀಕರಣದ ಕಾರ್ಯವನ್ನು ಕೈಯತ್ತಿಕೊಂಡಿದ್ದರು. ಇಂದಿನ ಈ ಉದ್ಘಾಟನಾ ಸಮಾರಂಭದಲ್ಲಿ ಮೀತ್ ಜತ್ತೆದಾರ ಜೊತೆಂದ್ರಸಿಂಗ್‍ಜೀ ತಕತ್ ಸಚ್‍ಖಂಡ್ ಶ್ರೀ ಹಜುರ್ ಸಾಹಬೇ ನಾಂದೇಡ್‍ದಿಂದ ಆಗಮಿಸಿದರು. ಭಾಯಿ ಸತನಾಮ ಸಿಂಗ್‍ಜಿ ಅಮೃತ್ ಸರ್ ಹಾಗೂ ಬಾವಾ ಗೊಂವಿಂದ್ರಸಿಂಗ್‍ಜಿ ಮುಂಬೈದಿಂದ ಆಗಮಿಸಿದರು.

ಈ ಸಂದರ್ಭದಲ್ಲಿ ಗುರುಗ್ರಂಥ ಸಾಹೇಬರ ಪಠಣ, ಅಖಂಡ ಪಾಠ ಹಾಗೂ ಬಂದ ಭಕ್ತಾದಿಗಳಿಗೆ ಲಂಗರ್ (ಪ್ರಸಾದ್) ವ್ಯವಸ್ಥೆ ಮಾಡಲಾಗಿತ್ತು.

ಬೀದರಿನ ಗುರುದ್ವಾರಾದ ಹೆಡ್ ಗ್ರಂಥಿ ಭಾಯಿ ಹರಪಾಲಸಿಂಗ್‍ಜಿ ಮತ್ತು ಗುರು ಪ್ರಬಂಧಕ ಕಮಿಟಿಯ ಅಧ್ಯಕ್ಷ ಡಾ| ಎಸ್. ಬಲಬೀರಸಿಂಗ್, ಗುರುದ್ವಾರದ ವ್ಯವಸ್ಥಾಪಕರು ಸರದಾರ ದರಬಾರಾ ಸಿಂಗ್, ಕಾರ್ಯದರ್ಶಿ, ಮುಖ್ಯಕಾರ್ಯದರ್ಶಿ, ಉಪಾಧ್ಯಕ್ಷರು, ಸದಸ್ಯರು, ಸರದಾರ ಮನಪ್ರೀತಸಿಂಗ್, ಸರದಾರ ಪುನಿತ್ ಸಿಂಗ್ ಮತ್ತು ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ