ತುಮಕೂರು,ಮಾ.3- ಒಂಟಿತನದಿಂದ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್ಇಪಿಎಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುಬ್ಬಿಯ ರಾಮಕೃಷ್ಣರವರ ಪುತ್ರ ರಕ್ಷಿತ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಈತ ತುಮಕೂರಿನ ವಿದ್ಯಾನಿಕೇತನ ಕಾಲೇಜಿನಲ್ಲಿ ಡಿಪ್ಲೋಮ ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಮನೆಗೆ ಹೋಗಿ ಬಂದಿದ್ದ ಈತ ಕೊಠಡಿಯಲ್ಲಿ ಒಬ್ಬನೆ ಇರುತ್ತಿದ್ದ. ಸದಾ ಬೇಸರದಿಂದ ಇರುವಂತೆ ತೋರುತ್ತಿದ್ದ. ಮೂರು ದಿನಗಳಿಂದ ತರಗತಿಗೆ ಹೋಗಿರಲಿಲ್ಲ.
ಆತನ ಸ್ನೇಹಿತರು ಮೊಬೈಲ್ಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಕೊಠಡಿ ಬಳಿ ಬಂದು ನೋಡಿದರೆ ಬಾಗಿಲು ತೆರೆದಿರಲಿಲ್ಲ. ಅವರ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಇಂದು ಬೆಳಗ್ಗೆಪೋಷಕರು, ವಿದ್ಯಾರ್ಥಿಗಳು ಒಳಗಿಂದ ಬಾಗಿಲು ಚಿಲಕ ಹಾಕಿದ್ದನ್ನು ಕಂಡು ಎನ್ಇಪಿಎಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ಬಾಗಿಲು ಒಡೆದು ನೋಡಿದಾಗ ಫ್ಯಾನ್ಗೆ ರಕ್ಷಿತ್ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ದೇಹ ವಾಸನೆ ಬರುತ್ತಿದ್ದು ಎರಡು ದಿನದ ಮೊದಲೇ ನೇಣು ಹಾಕಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕರಣ ದಾಖಲಿಸಕೊಂಡಿದ್ದಾರೆ. ವೃತ್ತ ನಿರೀಕ್ಷಕ ರಾಧಾಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.