ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಲಂಡನ್, ಮಾ.3-ಕಲೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ಹಿರಿಯ ಅಭಿನೇತ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬ್ರಿಟನ್ ಸಂಸತ್‍ಭವನದ ಸಂಕೀರ್ಣದ ಹೌಸ್ ಆಫ್ ಕಾಮನ್ಸ್ ಕಟ್ಟಡದಲ್ಲಿ ಗುರುವಾರ ರಾತ್ರಿ ನಡೆದ ಸಮಾರಂಭದಲ್ಲಿ ಸಿನ್ಹಾ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಭಾರೀ ಹಿಮಪಾತದ ನಡುವೆಯೂ ನಡೆದ ಈ ಸಮಾರಂಭದಲ್ಲಿ ಸಂಸದರು, ವಾಣಿಜ್ಯ ಮತ್ತು ಸಮುದಾಯ ನಾಯಕರು ಹಾಗೂ ಬ್ರಿಟನ್ ಸಶಸ್ತ್ರ ಪಡೆಗಳ ಸದಸ್ಯರು ಭಾಗವಹಿಸಿದ್ದರು.
ಪಶಸ್ತಿ ಸ್ವೀಕರಿಸಿ ಮಾತನಾಡಿದ 72 ವರ್ಷದ ಶತ್ರುಘ್ನ, ವಿಶ್ವಾಸತೆಯಿಂದ ಬದ್ದತೆ, ಬದ್ದತೆಯಿಂದ ದೃಢತೆ, ದೃಢತೆಯಿಂದ ಏಕಾಗ್ರತೆ ಮೂಡುತ್ತದೆ. ಬದ್ಧತೆ, ದೃಢತೆ ಹಾಗೂ ಏಕಾಗ್ರತೆಯೊಂದಿಗೆ ಆತ್ಮವಿಶ್ವಾಸವಿದ್ದಲ್ಲಿ ಜೀವನದಲ್ಲಿ ಸಾಧನೆ ಸಾಧ್ಯ ಎಂದು ಹೇಳಿದರು.
ಇದು ಸ್ಮರ್ಧಾತ್ಮಕ ಜಗತ್ತು. ನೀವು ಇನ್ನೊಬ್ಬರಿಗಿಂತ ಉತ್ತಮ ಎಂಬುದನ್ನು ಈ ಪೈಪೆÇೀಟಿ ಸನ್ನಿವೇಶದಲ್ಲಿ ಸಾಬೀತು ಮಾಡಬೇಕು. ನೀವು ಮತ್ತೊಬ್ಬರಿಗಿಂತ ಉತ್ತಮರೆಂದು ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಕನಿಷ್ಠ ಅದಕ್ಕಾಗಿ ಪ್ರಯತ್ನಿಸಬೇಕು ಹಾಗೂ ಉಳಿದವರಿಗಿಂತ ಭಿನ್ನವಾಗಿರಲು ಯತ್ನಿಸಬೇಕು ಎಂದು ಶತ್ರುಘ್ನ ಸಿನ್ಹಾ ತಿಳಿಸಿದರು.
ಬ್ರಿಟನ್‍ನ ಏಷ್ಯನ್ ವಾಯ್ಸ್ ಪಾಕ್ಷಿಕದಿಂದ ಪ್ರತಿ ವರ್ಷ ರಾಜಕೀಯ ಮತ್ತು ಸಾರ್ವಜನಿಕ ಜೀವನದ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಿನ್ಹಾ 12ನೇ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ