ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್,

ಬೀದರ್, ಮಾ.3-ಅಂತಿಮ ನಮನ,
ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್,
ಸುಶೀಲ್ ಕುಮಾರ್ ಸರ್ಕಾರಿ ಗೌರವದೊಂದಿದೆ ಅಂತಿಮ ನಮನ,
ಮೆಥೋಡಿಕ್ ಚರ್ಚ್ ಬಳಿಯ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ,.
ಬೀದರ್ ಡಿಸಿ, ಎಸ್ಪಿ, ತೆಲಂಗಾಣದ ಸಂಗ್ಗಾರೆಡ್ಡಿ ಎಸ್ಪಿಯಿಂದ ಅಂತಿ ದರ್ಶನ,
ಸುಶೀಲ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಹರಿದು ಬಂದ ಜನ ಸಾಗರ,.
ಅಂತಿಮ ದರ್ಶನಕ್ಕೂ ಬರದ ಸ್ಥಳೀಯ ಜನಪ್ರತಿನಿಧಿಗಳು,
ಕಾಟಾಚಾರಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಂಸದ ಭಗವಂತ ಖೂಬಾ,.
ಅಂತಿಮ ದರ್ಶನ ಪಡೆಯಲು ಬರದ ಜೆಡಿಎಸ್, ಕಾಂಗ್ರೆಸ್ ನಾಯಕರು,.
ತೆಲಂಗಾಣ ಸರ್ಕಾರದಿಂದ ೬೦ ಲಕ್ಷ ಪರಿಹಾರ, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ,.
ಅಂತ್ಯಕ್ರಿಯೆಗೆ ೩ ಲಕ್ಷ ನಗದು ಪರಿಹಾರ ನೀಡಿದ ತೆಲಂಗಾಣ ಡಿಜಿ,.

ಬೀದರ್-ನಕ್ಸಲರ ದಾಳಿ ವೇಳೆ ವೀರ ಮರಣ ಹೊಂದಿದ್ದ ಕನ್ನಡದ ವೀರ ಸುಶೀಲ್ ಕುಮಾರ ಅಂತ್ಯಕ್ರಿಯೆವನ್ನು ಬೀದರ್ ನಲ್ಲಿ ಸಕಲ ಸರ್ಕಾರಿ ಗೌರವದೊಂದಿದೆ ನೇರವೇರಿಸಲಾಯಿತು, ಈ ಕುರಿತ ಸಂಪೂರ್ಣ ವರದಿ‌ ಇಲ್ಲಿದೆ ನೋಡಿ,

ಅಮರ್ ಅಮರ್ ರಹೆ ರಹೆ ಸುಶೀಲ್ ಕುಮಾರ್ ಅಮರ್ ರಹೆ ಘೋಷಣೆ ಒಂದೆ ಕಡೆಯಾದ್ರೆ ಇನ್ಮೊಂದು ಕಡೆ ಎದೆ ಬಡಿದುಕಡು ಕರಳು ಹೊರ ಬರುವಂತೆ ಕಣ್ಣೀರು ಹಾಕುತ್ತಿರುವ ಕುಟುಂಬ ಇದೆಲ್ಲ ಕಂಡು ಬಂದಿದ್ದು ಗಡಿ ಜಿಲ್ಲೆಯ ಬೀದರ್ ನಲ್ಲಿ, ಛತ್ತೀಸ್ಗಢ-ಆಂಧ್ರ ಬಾರ್ಡರ್ ನಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕರ್ನಾಟಕದ ಬೀದರ್ ಮೂಲದ ಸುಶೀಲ್ ಕುಮಾರ್ ಅಂತಿಮ ನಮನ ಸಲ್ಲಿಸಿ,. ಅಂತ್ಯಕ್ರಿಯೆ ಮಾಡಲಾಯಿತು, ಬೀದರ್ ನಗರದ ಗ್ರೇಸ್ ಕಾಲೋನಿಯಲ್ಲಿರುವ ಸುಶೀಲ್ ಕುಮಾರ್ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸುಶೀಲಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು ಬಳಿಕ ಮೆಥೋಡಕ ಚರ್ಚನಲ್ಲಿ ಸರ್ಕಾರದಿಂದ ಮೂರು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು, ಇದೆ ಮೂರು ನಿಮಿಷ ಮೌನಾಚರಣೆ ಮಾಡಿ ಡಿಸಿ ಹೆಚ್.ಮಹದೇವ್, ಎಸ್ಪಿ ದೇವರಾಜ್, ಸಂಗ್ಗಾರೆಡ್ಡಿ ಎಸ್ಪಿ, ಗಣ್ಯರು ಸಾವಿರು ಸಂಖ್ಯೆಯಲ್ಲಿ ಬಂದಿದ್ದ ಜನರು ಅಂತಿಮ ದರ್ಶನ ಪಡೆದರು, ಬಳಿ ಚರ್ಚ್ ಬಳಿ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೇರವೇರಿಸಿದರು,.

ಇನ್ನೂ ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮನೆಗೆ ಭೇಟಿ ನೋಡಿದ ತೆಲಂಗಾಣ ರಾಜ್ಯದ ಡಿಜಿ ಮಹೇಂದ್ರ ರೆಡ್ಡಿ, ಐಜಿ ತೆಲಂಗಾಣ ಸರ್ಕಾರದಿಂದ ನಗದು ೩ ಲಕ್ಷ ನೀಡಿ, ೬೦ ಲಕ್ಷ ಪರಿಹಾರ ಘೋಷಣೆ ಮಾಡಿ, ಸುಶೀಲಕುಮಾರ್ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ಕೊಟ್ಟರು,. ಬಳಿಕ ಕಾಟಾಚಾರಕ್ಕೆ ಭೇಟಿ ನೀಡಿದ ಬೀದರ್ ಸಂಸದ ಭಗವಂತ ಖೂಬಾ ಸಾಂತ್ವಾನ ಕುಟುಂಬಕ್ಕೆ ಸಾಂತ್ವಾನ ಹೇಳಿ ಕೇಂದ್ರ, ರಾಜ್ಯ ಸರ್ಕಾರದಿಂದಲೂ ಪರಿಹಾರ ಕೊಡುವ ಭರವಸೆ ನೀಡಿ ತರಳಿದರು,. ಸಂಸದರು ಬಿಟ್ಟರೇ ಬೀದರ್ ಜಿಲ್ಲೆಯ ಸ್ಥಳೀಯ ಶಾಸಕರು ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಯಾವೊಬ್ಬ ನಾಯಕರು ಸುಶೀಲಕುಮಾರ್ ಮನೆ ಅಂತಿಮ ದರ್ಶನಕ್ಕೂ ಆಗಮಿಸದಕ್ಕೆ ಕ್ರೈಸ್ತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹುತಾತ್ಮ ಕನ್ನಡಿಗ ಸುಶೀಲಕುಮಾರ ವೀರ ಮರಣದಿಂದ ಬೀದರ್ ಜನತೆಯಲ್ಲಿ ದುಃಖ, ಮೌನ ಮನೆ ಮಾಡಿದ್ರೆ,.. ಇನ್ನೊಂದೆಡೆ ಸುಶೀಲಕುಮಾರ್ ಅಮರ್ ರಹೆ ಎಂಬ ಘೋಶ ವಾಕ್ಯ ಕೂಗಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಅಂತಿಮ ದರ್ಶನ ಪಡೆದರು,. ಆದ್ರೆ ಅಂತಿಮ ದರ್ಶನಕ್ಕೂ ಬಾರದ ಬೀದರ್ ಸ್ಥಳೀಯ ನಾಯಕರು ಜನತೆ ಆಕ್ರೋಶಕ್ಕೆ ಗುರಿಯಾಗಿದ್ದರು ಅಂದ್ರೆ ತಪ್ಪಾಗಲಾರದು,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ