ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ

ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ
ಬೆಂಗಳೂರು, ಮಾ.3- ಮಹಿಳೆಯರು ಮಕ್ಕಳ ಪಾಲನೆ, ಪೆÇೀಷಣೆ, ಮನೆ ನಿರ್ವಹಣೆಗೆ ಸೀಮಿತವಾಗಿರದೆ ಸಬಲೀಕರಣದತ್ತ ಹೆಜ್ಜೆ ಹಾಕುತ್ತಿರುವುದು ಬೆಳವಣಿಗೆಯ ಸಂಕೇತ ಎಂದು ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ತಿಳಿಸಿದರು.

ನಗರದ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ವೀಕ್ಷಿಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಇಂದು ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ ಎಂದರು.

ರೇಷ್ಮೆ ಮತ್ತು ಹತ್ತಿಯಿಂದ ಸಿದ್ದಪಡಿಸಿದ ವಿಭಿನ್ನ ಶೈಲಿಯ ಸೀರೆಗಳು, ಕುಸುರಿಕಲೆಯ ಚೂಡಿದಾರ್ ಬಟ್ಟೆಗಳು, ಆಕರ್ಷಕ ಓಲೆ, ಸರ, ವಿವಿಧ ಅಲಂಕಾರಿಕ ವಸ್ತುಗಳು ಹೆಂಗಳೆಯರ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕೈಗಾರಿಕೋದ್ಯಮಿಗಳು ಉತ್ತಮ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಆಶಿಸಿದರು.

ಅಲ್ಲದೆ ಗೃಹಲಂಕಾರಿಕ ವಸ್ತುಗಳು, ಬೊಂಬೆಗಳು, ಮರ ಮತ್ತು ಲೋಹದ ಅಲಂಕಾರಿಕ ವಸ್ತುಗಳು, ಹಳೆ ಕಾಲದ ಅಡುಗೆ ಪರಿಕರಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ