ಮೇಘಾಲಯದಲ್ಲಿ ಇತರರು ಮೇಲುಗೈ

ಶಿಲ್ಲಾಂಗ್‌: ಮೇಘಾಲಯದಲ್ಲಿ ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಇತರೆಯರದ್ದೇ ಮೇಲುಗೈ ಆಗಿದೆ. ಆದರೆ ಆಡಳಿತರೂಢ ಕಾಂಗ್ರೆಸ್‌ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 2ನೇ ಬಾರಿಗೆ ಅಧಿಕಾರ ಪಡೆಯುವ ಸಂಭವಿದೆ.

ನ್ಯಾಷನಲ್‌ ಡೆಮಾಕ್ರಸಿ ಪ್ರೋಗ್ರೆಸಿವ್‌ ಪಾರ್ಟಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಯುನೈಟೆಡ್‌ ಡೆಮಾಕ್ರಸಿ ಪಾರ್ಟಿ ಜತೆಗೆ ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಸಿ ಪಾರ್ಟಿ ಮತ್ತು ಇತರರ ಮೈತ್ರಿ ಪಡೆ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಒಟ್ಟು 60 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 22, ಎನ್‌ಪಿಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಅಧಿಕಾರಕ್ಕೆ 31 ಸ್ಥಾನಗಳ ಅಗತ್ಯವಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ