ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿಯಿಂದ ಪ್ರತಿಭಟನೆ

ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿಯಿಂದ ಪ್ರತಿಭಟನೆ
ಬೆಂಗಳೂರು, ಮಾ.3- ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿ ನಗರ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಬೆಂಗಳೂರು ಸಿಟಿಯ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ತಂದಿದ್ದರು ಎಂದು ಆರೋಪಿಸಿದರು.
ನಗರದ ಆನಂದರಾವ್ ವೃತ್ತದ ಬಳಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಬಿಎಂಪಿ ಕಟ್ಟಡಗಳ ಅಡಮಾನ, ಮಧ್ಯರಾತ್ರಿ ಟೆಂಡರ್, ಗಾರ್ಡ್‍ನ್ ಸಿಟಿಯನ್ನು ಗಾರ್ಬೆಜ್ ಸಿಟಿ ಮಾಡಿದ ಖ್ಯಾತಿ ಬಿಜೆಪಿಗೆ ಸಲ್ಲುತ್ತದೆ.
ತಮ್ಮ ಆಡಳಿತಾದವಧಿಯಲ್ಲಿ ಅಪರಾಧ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಬಿಜೆಪಿ ಪಕ್ಷದವರು ಇಂದು ಬೆಂಗಳೂರು ರಕ್ಷಿಸಿ ಎಂದು ಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಪ್ರತಿಭಟನೆ ನೇತೃತ್ವವ ವಹಿಸಿದ್ದ ನಗರ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ಧನ್ ಹೇಳಿದರು.
ರಾಜಧಾನಿ ಬೆಂಗಳೂರಿಗೆ ಕಳಂಕತಂದ ಬಿಜೆಪಿಯವರು ಮೋದಿಗಿರಿ ಬೇಕು ಎಂದು ಹೇಳುತ್ತಿದ್ದಾರೆ, ನೀರವ್‍ಮೋದಿ, ಲಲಿತ್‍ಮೋದಿ ದೇಶ ಬಿಟ್ಟು ಫಲಾಯನವಾಗುವ ಮೋದಿಗಳು ಬೇಕಾ ಎಂದು ಟೀಕಿಸಿದರು.
ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ದೇಶಬಿಟ್ಟು ಪಲಾಯನ ಮಾಡಿದ ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳದವರು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕವಿಕಾ ಅಧ್ಯಕ್ಷ ಮನೋಹರ್ ಶೇಖರ್, ರಾಮಕೃಷ್ಣ, ಆನಂದ್ ಮುಂತಾದವರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ