
ಕೊಹಿಮಾ: ನಾಗಾಲ್ಯಾಂಡ್ನ 60 ಸ್ಥಾನ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 30, ಎನ್ಪಿಎಫ್ 24ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು 5 ಸ್ಥಾನಗಳಲ್ಲಿ ಮುಂದಿದ್ದು, ಬಿಜೆಪಿ ಮೈತ್ರಿ ಕೂಟ ಸರಕಾರ ರಚಿಸುವುದು ನಿಚ್ಚಳವಾಗಿದೆ.
59 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎನ್ಡಿಪಿಪಿಯಿಂದ ಮಾಜಿ ಮುಖ್ಯಮಂತ್ರಿ ನೆಪಿಯು ರಿಯೊ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಗಾಲ್ಯಾಂಡ್ನಲ್ಲಿ 2003ರಿಂದ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಅಧಿಕಾರದಲ್ಲಿದೆ. ಚುನಾವಣೆ ವೇಳೆ ಬಿಜೆಪಿ ಮೈತ್ರಿ ಕಡಿದುಕೊಂಡಿದ್ದರೂ, ಆ ಪಕ್ಷದ ಸಖ್ಯಕ್ಕೆ ಈಗಲೂ ಸಿದ್ಧ ಎಂದು ಎನ್ಪಿಎಫ್ ಘೋಷಿಸಿದೆ.
ಈ ಸಲ ಬಿಜೆಪಿ ಮತ್ತು ನ್ಯಾಶನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ ಮೈತ್ರಿ ಮಾಡಿಕೊಂಡಿವೆ.