ಬೆಂಗಳೂರು:ಮಾ-2: ಉದ್ಯಮಿ ಪುತ್ರನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದು, ಮಾ.7 ರವರೆಗೆ ಅಷ್ಟೂ ಮಂದಿಗೆ ಜೈಲೇ ಗತಿಯಾಗಿದೆ.
ಶುಕ್ರವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾೀಶ ಪರಮೇಶ್ವರ ಪ್ರಸನ್ನ ಅವರು ಪ್ರಕರಣದ ಗಂಭೀರತೆ ಅರಿತು ಅರ್ಜಿ ತಿರಸ್ಕಾರ ಮಾಡಿದ್ದಾರೆ.
ಇದಕ್ಕೂ ಮೊದಲು ಅಂದರೆ, ಫೆ. 21 ರಿಂದ 14 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದರಿಂದ ಮಾ.7 ರವರೆಗೆ ಜೈಲಿನಲ್ಲೇ ಇರಬೇಕಾದ ಸ್ಥಿತಿ ಇತ್ತು. ಹೀಗಾಗಿಯೇ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಅರ್ಜಿದಾರರ ವಾದ ಹಾಗೂ ಪ್ರತಿವಾದಿಗಳ ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ಕೋರ್ಟ್, ಶುಕ್ರವಾರ ಹೊರಡಿಸಿದ್ದು, ಜಾಮೀನು ನಿರಾಕರಿಸಿರುವುದರಿಂದ ಮಾ.7 ರವರೆಗೆ ಜೈಲಿನಲ್ಲೇ ಇರಬೇಕಾಗಿದೆ.
ಪ್ರಮುಖವಾಗಿ ಈ ಪ್ರಕರಣವು ಗಂಭೀರವಾಗಿದ್ದು, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡುವುದು ಸರಿಯಲ್ಲ ಎಂಬ ವಿಶೇಷ ಅಭಿಯೋಜಕ ಶ್ಯಾಮ್ಸುಂದರ್ ವಾದವನ್ನು ನ್ಯಾಯಪೀಠ ಎತ್ತಿಹಿಡಿದಿದೆ.
ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ?
ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲವಾದ್ದರಿಂದ ಹೈಕೋರ್ಟ್ ಮೊರೆ ಹೋಗುವುದಾಗಿ ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ. ಆದರೆ, ಮಾ.3 ಮತ್ತು 4 ರಂದು ಶನಿವಾರ ಹಾಗೂ ಅನುವಾಗಿದ್ದು, ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಯಾದರೂ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ಇನ್ನೇನಿದ್ದರೂ ಸೋಮವಾರದ ನಂತರವಷ್ಟೇ ಹೈಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಬಹುದು. ಅಲ್ಲಿಯವರೆಗಂತೂ ಅರೋಪಿಗಳು ಕಾರಾಗೃಹವಾಸ ಅನುಭವಿಸಲೇಬೇಕು.
ಅರ್ಜಿ ನಿರಾಕರಣೆಗೆ ಕಾರಣ
ವಿದ್ವತ್ ಹಲ್ಲೆ ಪ್ರಕರಣದ ಆರೋಪಿಗಳೆಲ್ಲರೂ ಪ್ರ`Áವಿಗಳಾಗಿರುವುದರಿಂದ ಜಾಮೀನು ನೀಡಿದರೆ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುವ ಸಾ`À್ಯತೆ ಇದೆ ಎಂಬ ಮಾತನ್ನು ನ್ಯಾಯಾೀಶರು ತಮ್ಮ ತೀರ್ಪಿನಲ್ಲಿ ಉಲ್ಲಂಘಿಸಿದ್ದಾರೆ.
ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದೆ. ಈಗ ಜೈಲಿನಲ್ಲಿರುವ ಎಲ್ಲರೂ ಪ್ರಭಾವಿಗಳಾಗಿರುವುದರಿಂದ ಅವರಿಗೆ ಜಾಮೀನು ನೀಡುವುದು ಬೇಡ ಎಂಬ ಆದೇಶವನ್ನು ನ್ಯಾಯಾೀಶರು ಹೊರಡಿಸಿದ್ದಾರೆ.
ಹಲ್ಲೆ ಮಾಡಿದ ನಂತರ ಆರೋಪಿಗಳು ಆಸ್ಪತ್ರೆಯವರೆಗೂ ಹಿಂಬಾಲಿಸಿ ಬಂದು ಇನ್ನೊಮ್ಮೆ ಹಲ್ಲೆ ನಡೆಸಿದ್ದಾರೆ. ಇದು ಆರೋಪಿಗಳು ಮಾಡಿದ ಕೃತ್ಯದ ಗಂಭೀರತೆಯನ್ನು ತೋರಿಸುತ್ತದೆ. ಇದೊಂದು ಗಂಭೀರವಾದ ಪ್ರಕರಣ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಮಾಡಿದ ವಾದವನ್ನು ಒಪ್ಪಿಕೊಂಡು ಜಾಮೀನು ನೀಡಲು ನಿರಾಕರಿಸಿದೆ.
ಹೈಕೋರ್ಟ್ಗೆ ಅರ್ಜಿ
ವಿದ್ವತ್ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ದಾಖಲೆ ನೀಡಿದ್ದಾರೆ. ಹೀಗಾಗಿ ಹೈಕೋರ್ಟ್ಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಲಾಗುವುದು. ಅಲ್ಲಿ ಜಾಮೀನು ಸಿಗದಿದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ.
-ಬಾಲನ್, ಆರೋಪಿಗಳ ಪರ ವಕೀಲ
Mohammed nalapad, bail application, rejected