ಭೀಕರ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದ ಯುರೋಪ್‍ನ ಅನೇಕ ರಾಷ್ಟ್ರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಪ್ಯಾರಿಸ್/ವಾರ್ಸಾ, ಮಾ.2-ಯುರೋಪ್ ಖಂಡದಾದ್ಯಂತ ಭಾರೀ ಹಿಮಪಾತ ಮತ್ತು ಶೀತ ಬಿರುಗಾಳಿಯಿಂದ 55ಕ್ಕೂ ಹೆಚ್ಚು ಮಂದಿ ಮ್ಮತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ನೈಸರ್ಗಿಕ ವಿಕೋಪದಲ್ಲಿ ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಭೀಕರ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದ ಯುರೋಪ್‍ನ ಅನೇಕ ರಾಷ್ಟ್ರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಐರೋಪ್ಯ ಖಂಡದಲ್ಲಿ ಗುರುವಾರ ಒಂದೇ ದಿನ 55ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವು-ನೋವು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಪೆÇೀಲೆಂಡ್‍ನಲ್ಲಿ ಮಂಜಿನ ಬಂಡೆ ಅಡಿ ಸಿಲುಕಿ 24ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್, ಸ್ಪೇನ್, ಇಟಲಿ, ಸ್ಲೋವಾಕಿಯಾ, ಜೆಕ್ ಗಣರಾಜ್ಯ, ಲಿಥುವೇನಿಯಾ, ಸೈಬಿರಿಯಾ, ರುಮೇನಿಯಾ, ಸ್ಲೋವಾನಿಯಾ, ನೆದರ್‍ಲೆಂಡ್ಸ್, ಬ್ರಿಟನ್ ದೇಶಗಳಲ್ಲಿ ಸಾವು ನೋವು ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.
ಯುರೋಪಿನಾದ್ಯಂತ ಭಾರೀ ಹಿಮವರ್ಷದಿಂದಾಗಿ ಬಹುತೇಕ ಏರ್‍ಪೆÇೀರ್ಟ್‍ಗಳಲ್ಲಿ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿದೆ. ಉತ್ತರ ಭಾಗದಿಂದ ದಕ್ಷಿಣ ಮೆಡಿಟರೇನಿಯನ್ ಸಮುದ್ರ ತೀರದ ತನಕ ಅನೇಕ ದೇಶಗಳಲ್ಲಿ ದಟ್ಟ ಹಿಮ ಆವರಿಸಿದೆ.
ಯೂರೋಪ್‍ನಲ್ಲಿ ಈ ವರ್ಷ ಅಧಿಕ ಹಿಮಪಾತವಾಗಿದ್ದು, ರಸ್ತೆಗಳು ಮಂಜುಗಡ್ಡೆಗಳಾಗಿವೆ. ಸಂಚಾರ ವ್ಯವಸ್ಥೆ ವ್ಯತ್ಯಯವಾಗಿದ್ದು, ಮಾರ್ಗಮಧ್ಯೆ ನೂರಾರು ವಾಹನಗಳ ಚಾಲಕರು ಅತಂತ್ರರಾಗಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ವಾಣಿಜ್ಯ ಕೇಂದ್ರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಇನ್ನೂ 3-4 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ