ತಿರುಪತಿ, ಮಾ.2-ಆಂಧ್ರಪ್ರದೇಶ ಪೆÇಲೀಸರು ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ತಿರುಪತಿ ಬಳಿ 80 ರಕ್ತಚಂದನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರೆಲ್ಲರೂ ತಮಿಳುನಾಡಿನವರಾಗಿದ್ದು, ರಕ್ತಚಂದನ ಮರಗಳನ್ನು ಕತ್ತರಿಸಲು ಮುಂದಾಗುತ್ತಿದ್ದಾಗ ಪೆÇಲೀಸರು ತಮ್ಮ ಬಲೆಗೆ ಕೆಡವಿಕೊಂಡಿದ್ದಾರೆ.
ತಿರುಪತಿಯಿಂದ 80 ಕಿ.ಮೀ. ದೂರದಲ್ಲಿರುವ ಆಂಜನೇಯಪುರಂನಲ್ಲಿ ಇಂದು ನಸುಕಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ತಮಿಳುನಾಡಿನ ಆರ್ಕಾಟ್‍ನಿಂದ ರಕ್ತಚಂದನ ಸಮೃದ್ಧವಾಗಿದ್ದ ಅರಣ್ಯದಲ್ಲಿ ಲಾರಿ ನಿಲ್ಲಿಸಿ ಮರಗಳನ್ನು ಕಟಾವು ಮಾಡಲು ಸಿದ್ದತೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಸುಳಿವನ್ನು ಅರಿತ ರಕ್ತಚಂದನ ಕಳ್ಳಸಾಗಣೆ ನಿಗ್ರಹ ಪಡೆ ಪೆÇಲೀಸರು ಹಠಾತ್ ದಾಳಿ ನಡೆಸಿ 80 ಮಂದಿಯನ್ನು ಬಂಧಿಸಿದರು.
ಆಂಧ್ರಪ್ರದೇಶದ ಶೇಷಾಚಲಂ ಪರ್ವತ ಶ್ರೇಣಿಗಳಲ್ಲಿ ರಕ್ತಚಂದನ ಮರಗಳು ವಿಫುಲವಾಗಿದ್ದು, ಅಗಾಗ ಕಳ್ಳಕಾಕರ ವಕ್ರದೃಷ್ಟಿಗೆ ಬೀಳುತ್ತಿದೆ.