ಬೆಂಗಳೂರು, ಮಾ.2- ನಗರದ ಎರಡು ಕಡೆ ಸರಗಳ್ಳರು ಸರ ಅಪಹರಣ ನಡೆಸಿರುವುದು ವರದಿಯಾಗಿದೆ.
ಸರಗಳ್ಳರು ಬೈಕ್‍ನಲ್ಲಿ ಸುತ್ತಾಡುತ್ತಾ ಹುಳಿಮಾವು ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ 60 ಗ್ರಾಂ ಸರ ಅಪಹರಿಸಿದ್ದರೆ, ಚಿಕ್ಕಜಾಲ ವ್ಯಾಪ್ತಿಯಲ್ಲಿ 80 ಗ್ರಾಂ ಸರವನ್ನು ಎಗರಿಸಿದ್ದಾರೆ.
ಹುಳಿಮಾವು:
ಬೇಗೂರಿನ ಅಜೆಂಡ ಅಪಾರ್ಟ್‍ಮೆಂಟ್ ಬಳಿ ರಾತ್ರಿ 8.15ರಲ್ಲಿ ಸಾವಿತ್ರಮ್ಮ ಎಂಬುವರು ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲಿದ್ದ 60 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸಹಾಯಕ್ಕಾಗಿ ಕೂಗಿಕೊಳ್ಳುವಷ್ಟರಲ್ಲಿ ಸರಗಳ್ಳರು ಅಲ್ಲಿಂದ ಕಣ್ಮರೆಯಾಗಿದ್ದರು.
ಚಿಕ್ಕಜಾಲ:
ಮುದುಕದಹಳ್ಳಿ ಬಳಿ ತನುಜಮ್ಮ ಎಂಬುವರು ನಿನ್ನೆ ಸಂಜೆ 6 ಗಂಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು ಇವರ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ 80 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾರೆ.
ಈ ಎರಡು ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಸರಗಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.