ಬಾಕು, ಮಾ.2-ಅಜೆರ್ಬೈಜಾನ್ ರಾಜಧಾನಿ ಬಾಕು ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದ ಘೋರ ಅಗ್ನಿ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.
ಮಾದಕ ವ್ಯರ್ಜನ ಪುನರ್ವಸತಿ ಕೇಂದ್ರದಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ ಎಂದು ಸ್ಥಳೀಯ ವಾರ್ತಾ ಸಂಸ್ಥೆಯೊಂದು ತಿಳಿಸಿದೆ.
ಮಾದಕ ವ್ಯಸನಿಗಳಿಗೆ ದುಶ್ಚಟದಿಂದ ವಿಮುಕ್ತಿಗೊಳಿಸಲು ಈ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಆಕಸ್ಮಿಕ ಬೆಂಕಿ ದುರ್ಘಟನೆಯಲ್ಲಿ ಕನಿಷ್ಠ 30 ಮಂದಿ ಸಜೀವ ದಹನವಾಗಿದ್ದಾರೆ ಎಂದು ವರದಿ ಹೇಳಿದೆ.
ಅಗ್ನಿಶಾಮಕ ಇಲಾಖೆ ಮತ್ತು ತುರ್ತುರಕ್ಷಣಾ ಸಚಿವಾಲಯದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.
ಅಗ್ನಿ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.