ಬೆಂಗಳೂರು, ಮಾ.1- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ಕಿರುಕುಳವೆಸಗಿದ್ದ ಆರೋಪಿಗೆ ಸಿಸಿಎಚ್-54ನೆ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಕನಕಪುರ ಟೌನ್ ನಿವಾಸಿ ಆನಂದ್ (28) ಶಿಕ್ಷೆಗೊಳಗಾದ ಆರೋಪಿ.
ಆರೋಪಿಗೆ ಪೆÇೀಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದ್ದು, ದಂಡ ತಪ್ಪಿದರೆ ಹೆಚ್ಚುವರಿ ಎರಡು ವರ್ಷಗಳ ಸಾಧಾರಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಕಳೆದ ಮಾ.10ರಂದು ಜರಗನಹಳ್ಳಿಯ 6ನೆ ಹಂತದಿಂದ ಆರೋಪಿ ಆನಂದ್ ಬಾಲಕಿಯನ್ನು ಅಪಹರಿಸಿ ಕನಕಪುರದ ಕಬ್ಬಾಳು ಬಳಿಯ ಲಾಡ್ಜ್ವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಬಾಲಕಿಯು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಉಪವಿಭಾಗದ ಪುಟ್ಟೇನಹಳ್ಳಿ ಠಾಣೆ ಪೆÇಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಲತಾಕುಮಾರಿ ಅವರು ಆರೋಪಿ ಆನಂದ್ನನ್ನು ಅಪರಾಧಿ ಎಂದು ಘೋಷಣೆ ಮಾಡಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.