ಆಹಾರ ಸುರಕ್ಷತೆ ನಿಯಮ ಪಾಲಿಸದ ಅಂಗಡಿಗಳಿಗೆ ದಂಡ
ಬೀದರ, ಜಿಲ್ಲಾ ಅಂಕಿತ ಅಧಿಕಾರಿ ಡಾ.ಶಿವಶಂಕರ.ಬಿ ಅವರ ನೇತೃತ್ವದಲ್ಲಿ ರಚಿಸಿದ ತಂಡದಿಂದ ಇತ್ತೀಚಿಗೆ ಔರಾದ್
ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ ಅಂಗಡಿಗಳಿಂದ
43,700 ರೂ.ಗಳ ದಂಡ ವಸೂಲಿ ಮಾಡಲಾಯಿತು.
ಮೂರು ತಂಡಗಳು ಪಟ್ಟಣದ ವಿವಿಧ ಅಂಗಡಿ, ಧಾಬಾ, ಹೋಟೆಲ್, ಜೂಸ್ ಸೆಂಟರ್, ಬೇಕರಿ, ರಸ್ತೆ ಬದಿ
ತಳ್ಳುಗಾಡಿಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ನೋಂದಣಿ ಮಾಡಿಸದ ಮತ್ತು ಪರವಾನಗಿ
ಇಲ್ಲದೇ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಲಾಯಿತು. ಕಳಪೆ ಮಟ್ಟದ ಆಹಾರ
ಕಂಡು ಬಂದಿರುವ ಸುಮಾರು 6 ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೊಗಾಲಯಕ್ಕೆ
ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಶಿವಶಂಕರ.ಬಿ ಮಾತನಾಡಿ, ಆಹಾರ ಪದಾರ್ಥಗಳನ್ನು ಮಾರಾಟ
ಮಾಡುವ ಪ್ರತಿಯೊಬ್ಬರು ನೋಂದಣಿ ಅಥವಾ ಪರವಾನಗಿ ಪಡಿಯಬೇಕು. ಸಾರ್ವಜನಿಕರಿಗೆ ಗುಣಮಟ್ಟದ ಆಹಾರ
ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ಕಾರ್ಯಾಚರಣೆಯಲ್ಲಿ ಔರಾದ್ ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹೇಶ ಬೀರಾದರ, ಅರವಿಂದ, ಡಾ.ಪ್ರವೀಣ
ಹೂಗಾರ್, ಭಾಲ್ಕಿ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಸತೀಶ್, ಆಹಾರ ಸುರಕ್ಷತಾ ಸಹಾಯಕರಾದ ಸಂಗಮೇಶ
ಕುಡ್ಲೆ, ರಮೇಶ ಬಿಕ್ಲೆ, ಸುನಿಲ ಕುಮಾರ ಕಸ್ತೂರೆ, ಪೊಲೀಸ್ ಇಲಾಖೆಯ ಉಪ್ಪಯ್ಯಾ ಸ್ವಾಮಿ, ವಿರಶೆಟ್ಟಿ, ಸಂಜು,
ಪಟ್ಟಣ ಪಂಚಾಯಿತಿಯ ಧನರಾಜ ಕುಡ್ಲೆ, ಜಮಿರ, ಮಾರುತಿ ಭಾಗವಹಿಸಿದ್ದರು.