ಆರ್.ಅಶೋಕ್ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ
ಬೆಂಗಳೂರು,ಮಾ.1- ಪ್ರತಿಯೊಂದು ಕೆಲಸಗಳನ್ನೂ ಎಲೆಕ್ಷನ್‍ಗೆ ಕಮೀಷನ್ ಹೊಡೆಯಲು ಮಾಡುತ್ತಿದ್ದಾರೆ ಎಂದು ಆರೋಪಿಸುವ ಆರ್.ಅಶೋಕ್ ಇವರು ಸಚಿವರಾಗಿದ್ದಾಗ ಇದೇ ಕಾರಣಕ್ಕೆ ಕೆಲಸ ಮಾಡುತ್ತಿದ್ದರಾ ಎಂದು ಗೃº ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಕಾಮಗಾರಿಗಳನ್ನು ಎಲೆಕ್ಷನ್ ಕಮೀಷನ್ ಪಡೆಯಲು ಮಾಡುತ್ತಾರೆ ಎಂದು ಆರೋಪಿಸುವ ಅಶೋಕ್ ಅವರು, ಇವರ ಕಾಲದಲ್ಲಿ ಆಗಿರುವ ಕೆಲಸಗಳನ್ನೆಲ್ಲ ಇದೇ ಕಾರಣಕ್ಕೆ ಮಾಡುತ್ತಿದ್ದರಾ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದರು.