ಮುಂದಿನ ನಿರ್ಧಾರ ಹೊರಡಿಸುವವರೆಗೂ ಪ್ರಧಾನಿ ಮೋದಿ ಡಿಗ್ರಿ ದಾಖಲೆ ಬಹಿರಂಗ ಪಡಿಸದಂತೆ ಹೈಕೋರ್ಟ್ ಆದೇಶ

ನವದೆಹಲಿ:ಮಾ-1: ಮುಂದಿನ ನಿರ್ಧಾರ ಹೊರಡಿಸುವವರೆಗೂ ಪ್ರಧಾನಿ ನರೇಂದ್ರ ಮೋದಿ ಬಿಎ ತೇರ್ಗಡೆಯಾದ ವರ್ಷದ ದಾಖಲೆಗಳನ್ನು ಆರ್ ಟಿಐ ಅಡಿ ಬಹಿರಂಗ ಪಡಿಸಬಾರದೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.

 

ಕೇಂದ್ರ ಮಾಹಿತಿ ಆಯೋಗದ ನಿರ್ದೇಶನ ಪ್ರಶ್ನಿಸಿ ವಿಶ್ವ ವಿದ್ಯಾನಿಲಯ  ಪ್ರಮಾಣ ಪತ್ರವನ್ನು ಕೋರ್ಟ್ ಗೆ ಸಲ್ಲಿಸಿತ್ತು. 1978 ರಲ್ಲಿ ಬಿಎ ಪರೀಕ್ಷೆಯ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಕೋರಿತ್ತು. 1978 ರಲ್ಲಿ ಡಿಗ್ರಿ  ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸಲು ಅವಕಾಶ ನೀಡುವಂತೆ ಸಿಐಸಿ ಕೋರಿತ್ತು, ಈ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪರೀಕ್ಷೆ ಬರೆದಿದ್ದರು.

 

ವಿವಿಯ ಮಾಹಿತಿಗಳನ್ನು ಮಾಹಿತಿ ಹಕ್ಕು ಆಯೋಗದಡಿ ಬಹಿರಂಗ ಪಡಿಸದಂತೆ ದೆಹಲಿ ವಿವಿಗೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ಫಲಿತಾಂಶದ ವಿವರಗಳನ್ನು ಬಹಿರಂಗ ಪಡಿಸುವುದರಿಂದ ವ್ಯಕ್ತಿಗೆ ಸಾರ್ವಜನಿಕವಾಗಿ ಮುಜುಗರ ಉಂಟಾಗುತ್ತದೆ, ಹೀಗಾಗಿ ಅವರ ವಯಕ್ತಿಕ ಹಾಗೂ ದಿನನಿತ್ಯದ ಜೀವನಕ್ಕೆ ಅಡಚಣೆ ಉಂಟಾಗುತ್ತದೆ ಎಂದು ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ