ಸುಪ್ರೀಂ ತೀರ್ಪನ್ನು ಗೌರವಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು: ಕಮಲ್ ಹಾಸನ್ ಆಗ್ರಹ

ಚೆನ್ನೈ: ಮಾ-1: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷದ ಸ್ಥಾಪಕ, ನಟ ಕಮಲ್ ಹಾಸನ್ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ನಿರಾಸಕ್ತಿ ತೋರಿಸಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕಮಲ್, ಸುಪ್ರೀಂ ನೀಡಿರುವ ತೀರ್ಪನ್ನು ಕೇಂದ್ರ ಸರಕಾರ ಗೌರವಿಸಬೇಕು. ನಿಯಮಗಳು ಜಾರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಲು ಆರು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಎಂಬ ಸುಪ್ರೀಂ ತೀರ್ಪನ್ನು ಸರಕಾರ ಗೌರವಿಸಿ ಮಂಡಳಿಯನ್ನು ರಚಿಸಬೇಕು ಎಂದಿದ್ದಾರೆ.

ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚೆನ್ನೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಷ್ಟು ಸುಲಭದ ಕೆಲಸವಲ್ಲ. ಶೀಘ್ರದಲ್ಲಿ ಮಂಡಳಿ ರಚನೆ ಸಾಧ್ಯವಿಲ್ಲ. ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ಎಂದಿದ್ದರು. ಅಲ್ಲದೇ ಇದು ದೊಡ್ಡ ಕಾರ್ಯ. ಈ ಬಗ್ಗೆ ನಾನು ಯಾವುದೇ ಆಶ್ವಾಸನೆ ನೀಡಲು ಸಾಧ್ಯವಿಲ್ಲ ಎಂದಿದ್ದರು.

Cauvery dispute, Kamal Haasan,urges Centre,honour and respect SC directive

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ