ವಿಜಯಪುರ,ಮಾ.1-ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಝಳಕಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ನಿನ್ನೆ ಸಂಜೆ 15 ವರ್ಷದ ಬಾಲಕಿಯೊಬ್ಬಳು ಜಮೀನಿನಲ್ಲಿ ಮೇವು ತರಲೆಂದು ತೆರಳಿದ್ದಾಳೆ. ಈ ವೇಳೆ ನಾಗೇಶ್ ಭೋಜು ಚವ್ಹಾಣ್(22) ಎಂಬಾತ ಪಕ್ಕದಲ್ಲೇ ಇದ್ದ ತೋಟದ ಶೆಡ್ಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಇಂದು ಬೆಳಗ್ಗೆ ಈ ಬಗ್ಗೆ ಬಾಲಕಿ ತಂದೆಗೆ ವಿಷಯ ತಿಳಿದಿದ್ದು, ತಂದೆ ಝಳಕಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.