ಸ್ಯಾರಿ ಗಾರ್ಡ್ ಮತ್ತು ಹ್ಯಾಂಡ್‍ಗ್ರಿಪ್ ಕಡ್ಡಾಯಗೊಳಿ ಸುಪ್ರೀಂಕೋರ್ಟ್ ಆದೇಶ

ನವದೆಹಲಿ, ಫೆ.28-ದ್ವಿಚಕ್ರ ವಾಹನಗಳ ತಯಾರಕರು ಮತ್ತು ಉತ್ಪಾದಕರು ಇನ್ನು ಮುಂದೆ ಹಿಂಬದಿ ಸವಾರರಿಗಾಗಿ ಸುರಕ್ಷಿತಾ ಸಾಧನಗಳಾದ ಸ್ಯಾರಿ ಗಾರ್ಡ್ ಮತ್ತು ಹ್ಯಾಂಡ್‍ಗ್ರಿಪ್ ಅಳವಡಿಸುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ವೋಚ್ಚ ನ್ಯಾಯಾಲಯ, ಇಂಥ ಸುರಕ್ಷಿತ ವ್ಯವಸ್ಥೆ ಇಲ್ಲದ ದ್ವಿಚಕ್ರವಾಹನಗಳ ನೋಂದಣಿ ನಿಷೇಧಿಸಿ ಮಧ್ಯಪ್ರದೇಶ ಹೈಕೋರ್ಟ್ 2008ರಲ್ಲಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿಗಳಾದ ಎ.ಕೆ ಗೋಯೆಲ್ ಮತ್ತು ಯು.ಯು.ಲಲಿತ್ ಅವರನ್ನು ಒಳಗೊಂಡ ಪೀಠವು. ಮೋಟಾರು ವಾಹನ ನಿಯಮಾವಳಿಯ 123ನೇ ನಿಯಮದ ಅನ್ವಯ ಹಿಂಬದಿ ಸವಾರರಿಗೂ ಕೂಡ ಸುರಕ್ಷತಾ ಸಾಧನಗಳನ್ನು ಕಡ್ಡಾಯಗೊಳಿಸಬೇಕೆಂಬ ಆದೇಶವನ್ನು ಎತ್ತಿ ಹಿಡಿದಿದೆ.
ಈ ಆದೇಶವನ್ನು ಮಧ್ಯಪ್ರದೇಶ ಉಚ್ಛ ನ್ಯಾಯಾಲಯ ನವೆಂಬರ್ 25, 2008ರಲ್ಲೇ ಹೊರಡಿಸಿತ್ತಾದರೂ, ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘವು ಈ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆಲವೇ ವಾರಗಳಲ್ಲಿ ಈ ಆಜ್ಞೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ