ಮೋದಿಯಂತಹ ಕೀಳುಮಟ್ಟದ ಪ್ರಧಾನಿಯನ್ನು ನೋಡೇ ಇಲ್ಲ – ಸಿಎಂ ಸಿದ್ದರಾಮಯ್ಯ

ಕೊಪ್ಪಳ, ಫೆ.28-ಮೋದಿಯಂತಹ ಕೀಳುಮಟ್ಟದ ಪ್ರಧಾನಿಯನ್ನು ನೋಡೇ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಕ್ ಮೂಲಕ ಲಂಚ ತೆಗೆದುಕೊಂಡಿರುವವರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇವರಿಗಿಲ್ಲ ಎಂದು ಟೀಕಿಸಿದ್ದಾರೆ.
ಬಸಾಪುರ ಖಾಸಗಿ ಏರ್ಪೋರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಅವರ ಸರ್ಕಾರ ಶೇ.90ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ. ಲಲಿತ್‍ಮೋದಿ, ನೀರವ್ ಮೋದಿ, ವಿಜಯ್‍ಮಲ್ಯ ಓಡಿ ಹೋಗಿದ್ದು ಯಾರ ಕಾಲದಲ್ಲಿ ಎಂದು ಪ್ರಶ್ನಿಸಿದರು.
ನಮ್ಮದು ಭ್ರಷ್ಟ ಸರ್ಕಾರ ಎನ್ನುವುದಕ್ಕೆ ಏನು ಸಾಕ್ಷಿ ಇದೆ. ನಾನು ಲೆಕ್ಕ ಕೊಡಬೇಕಾಗಿರುವುದು ರಾಜ್ಯದ ಜನತೆಗೆ ಹೊರತು ಅಮಿತ್‍ಷಾಗಲ್ಲ ಎಂದು ಕಿಡಿಕಾರಿದರು.
ಬೀಜ, ಗೊಬ್ಬರ ಕೇಳಿದ ರೈತರನ್ನು ಕೊಂದು ಹಾಕಿದವರು ರೈತರ ಬಂಧು ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪಗೆ ರೈತ ಬಂಧು ಎಂಬ ಅಭಿದಾನ ವಿಚಾರವಾಗಿ ಪ್ರತಿಕ್ರಿಯಿಸಿದರು.
ರಾಜ್ಯಕ್ಕೆ ಮೂರು ಬಾರಿ ಬಂದ ಪ್ರಧಾನಿ ಮೋದಿಯವರು ರೈತರ ಪರ ಏನನ್ನೂ ಹೇಳಲಿಲ್ಲ. ರಾಹುಲ್ ಅವರಿಗೆ ಹೋರಾಟಗಾರರ ಭೇಟಿಯಾಗುವ ವಿಚಾರ ಗೊತ್ತಿರಲಿಲ್ಲ. ಅದೊಂದು ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಎಂದು ಉತ್ತರಿಸಿದರು.
ಶ್ರೀರಾಮುಲು ಅವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ 60ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂಬ ಶ್ರೀರಾಮುಲು ಮಾತಿಗೆ ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ