ಮೂಡಿ ಹೂಡಿಕೆದಾರರ ಸೇವಾ ಸಂಸ್ಥೆಯ ವಿಶ್ಲೇಷಣೆ

ನವದೆಹಲಿ, ಫೆ.28-ಭಾರತ 2018ರ ಕ್ಯಾಲೆಂಡರ್ ವರ್ಷದಲ್ಲಿ ಶೇ.7.6ರಷ್ಟು ಪ್ರಗತಿ ಸಾಧಿಸಲಿದೆ ಎಂದು ಮೂಡಿ ಹೂಡಿಕೆದಾರರ ಸೇವಾ ಸಂಸ್ಥೆ ಅಂದಾಜು ಮಾಡಿದೆ.
ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯ ಪರಿಣಾಮಗಳಿಂದ ಆರ್ಥಿಕ ಚೇತರಿಕೆ ಲಕ್ಷಣಗಳಿದ್ದರೂ 2018ರಲ್ಲಿ ಶೇ.7.6 ಹಾಗೂ 2019ರಲ್ಲಿ ಶೇ.7.5ರಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ಮೂಡಿ ವಿಶ್ಲೇಷಣೆ ಮಾಡಿದೆ.
2016ರ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ನೋಟು ಅಮಾನ್ಯೀಕರಣದ ನಕರಾತ್ಮಕ ಪರಿಣಾಮ ಹಾಗೂ ಕಳೆದ ವರ್ಷ ಜಾರಿಗೊಳಿಸಿದ ಸರಕುಗಳು ಮತ್ತು ಸೇವೆಗಳ ತೆರಿಗೆಯಿಂದ ಉಂಟಾದ ಗೊಂದಲಗಳೂ ಇದ್ದರೂ ಭಾರತದ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬಂದಿದೆ. ಈ ಚೇತರಿಕೆಯಿಂದಾಗಿ 2018 ಮತ್ತು 2019ರಲ್ಲಿ ಆಶಾದಾಯಕ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಮೂಡಿ ತಿಳಿಸಿದೆ.
ಅಮಾನ್ಯೀಕರಣ ನೀತಿಯಿಂದ ಹೊಡೆತಕ್ಕೆ ಒಳಗಾಗಿದ್ದ ಗ್ರಾಮೀಣ ಆರ್ಥಿಕತೆಗೆ 2018-19ರ ಆಯವ್ಯಯದಲ್ಲಿನ ಕೆಲವು ಕ್ರಮಗಳು ಸ್ಥಿರತೆಯನ್ನು ನೀಡಲಿದೆ ಎಂದು ಅದು ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ