ಕಾಂಗ್ರೇಸ್ ಸಂಸ್ಕøತಿಯೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ – ಪ್ರಧಾನಿ ಮೋದಿ

ದಾವಣಗೆರೆಯ ರ್ಯೆತರ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಕನ್ನಡದಲ್ಲಿ ಭಾಷಣ ಅರಂಬಿಸಿದ ಪ್ರಧಾನಿ, ಸಾಗರೋಪಾದಿಯಲ್ಲಿ ಸೇರಿರುವ ಜನರಿಗೆ ನನ್ನ ಅಭಿನಂದನೆಗಳು, ಸಂತ ಕನಕದಾಸ, ಸಂತ ಕಬೀರ, ಓನಕೆ ಓಬವ್ವ ಮತ್ತು ಮಧಕರಿನಾಯಕರಂತಹ ಮಹನೀಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದರು. ಕರ್ನಾಟಕ ರ್ಯೆತರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿರುವುದು ಮತ್ತು ಯಡಿಯೂರಪ್ಪನವರ ಜನ್ಮ ದಿನದಂದು ಅವರನ್ನು ಸನ್ಮಾನಿಸುವುದು ಖುಷಿಯ ವಿಷಯವಾಗಿದೆ ಎಂದು ಹೇಳಿದರು.

ಗುಜರಾತ್‍ನಲ್ಲಿ ದೇಶದಲ್ಲೇ ದೊಡ್ಡದಾದ ಸರದಾರ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಮಾಡಿತ್ತಿದ್ದೇವೆ, ನಿರ್ಮಾಣಕ್ಕೆ ಲೋಹವು ದಾನದ ರೂಪದಲ್ಲಿ ಸಿಕ್ಕಿದೆ ಎಂದು ಹೇಳಿದರು. ಅದೇ ರೀತಿ ಕರ್ನಾಟಕ ನಿರ್ಮಾಣಕ್ಕೆ ಮುಷ್ಠಿ ಅನ್ನ ಯೋಜನೆ ನೀಡುತ್ತಿದ್ದೀರಿ ಎಂದು ಹೇಳಿದರು. ಕಾಂಗ್ರೇಸ್ ಸಂಸ್ಕøತಿಯೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ, ಕರ್ನಾಟಕದಲ್ಲಿ ಕಾಂಗ್ರೇಸ್ಗೆ ವಿಧಾಯ ಹೇಳಲು ಜನರು ಉತ್ಸಾಹ ಹೊಂದಿದ್ದಾರೆ, ಕಾಂಗ್ರೇಸ್ ಸರ್ಕಾರದ ವಿರುದ್ದ ಅಕ್ರೋಶವಿದೆ ಎಂದು ಹೇಳಿದರು. ದೇಶದಲ್ಲಿರುವ ಗ್ರಾಮಗಳ ಭಾಗ್ಯ ಬದಲಾದರೆ ದೇಶದ ಭಾಗ್ಯ ಬದಲಾಗುತ್ತದೆ ಎಂದು ಹೇಳಿದರು.

ಕೃಷಿಯನ್ನು ವ್ಯೆಜಾÐನಿಕ ರೀತಿಯಲ್ಲಿ ಬೆಳೆಸಲು ಯೋಜನೆ ಮಾಡಲಾಗಿದೆ, ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ, ವಿಮೆ ದೊರೆಯುವ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ ಜಾರಿಗೆ ತಂದಿರುವದರಿಂದ ಜಮೀನಿನ ಮಣ್ಣು ಸತ್ವವಾಗಿರುತ್ತದೆ, ಇದರಿಂದ ಜಮೀನು ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು. ದೇಶದ ರ್ಯೆತರ ಅಭಿವೃಧ್ಧಿಯಾಗಬೇಕು, ರಾಜ್ಯದ ರ್ಯೆತರು 11000 ಕೋಟಿ ಬೆಳೆ ವಿಮೆ ಪಡೆದಿದ್ದಾರೆ.

60 ವರ್ಷ ದೇಶವನ್ನು ಆಳಿದ ಕಾಂಗ್ರೇಸ್ ರ್ಯತರಿಗೆ ಎನು ಉಪಯೋಗವಾಗಿಲ್ಲ, ಅದರೆ ನಾವು 60 ತಿಂಗಳಲ್ಲಿ ರ್ಯೆತರ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ, ಮಿಷನ್ ಗ್ರೀನ್ ಯೋಜನೆಯನ್ನು ಪ್ರಾರಂಬಿಸಿದ್ದೇವೆ ಎಂದು ಹೇಳಿದರು. ಕಾಂಗ್ರೇಸ್ ಸರ್ಕಾರ ಈ ಸಲ ಚುನಾವಣೆ ಸೋಲಲಿದೆ, ಸಿ.ಎಂ.ರನ್ನು ಸೀದಾ ರೂಪಯಿ ವಾಲ ಎಂದು ಹೇಳಿದರು. ನಿಮಗೆ ಸೀದಾ ರೂಪಯಿ ಸರ್ಕಾರ ಬೇಕ, ಪ್ರಾಮಾಣಿಕ ಸರ್ಕಾರ ಬೇಕ ಎಂದು ಸಮಾವೇಶದಲ್ಲಿ ಜನರನ್ನು ಪ್ರಶ್ನಿಸಿದರು. 10% ವ್ಯವಹಾರ ಮುಗುಯುವತನಕ ಯಾವುದೇ ಅಭಿವೃಧ್ಧಿಯ ಕೆಲಸಗಳು ನೆಡೆಯುವದಲ್ಲಿ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಹಣ ಮಂಜೂರು ಮಾಡಿದೆ, ಅದರೆ ಮಂಜೂರು ಮಾಡಿದ ಹಣ ಉಪಯೋಗಿಸದೆ ಹಾಗೆ ಉಳಿದಿದೆ ಎಂದು ಹೇಳಿದರು. ದಾವಣಗೆರೆ ಚಿರ್ತದುರ್ಗ ಹೆದ್ದಾರಿಗೆ 6 ಪಥಗಳ ಹೆದ್ದಾರಿಗೆ 130 ಕೋಟಿ ಅನುದನ, ಮಹಿಳೆಯರ ಆರೋಗ್ಯಕ್ಕೆ ಕೇಂದ್ರದಿಂದ ಹಣವನ್ನು ಕೊಡಲಾಗಿತ್ತು, 500 ಕೋಟಿ ಹಣವನ್ನು ವೆಚ್ಚಮಾಡಿಲ್ಲ, ಅದು ಹಾಗೆ ಇದೆ, ಎಲ್ಲರ ಆಶಯ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಸರ್ವಶಿಕ್ಷಣ ಅಭಿಯಾನದ 400 ಕೋಟಿ ಬಳಕೆಯಾಗಿಲ್ಲ ಎಂದು ಹೇಳಿದರು. ಗುಜರಾತ್‍ನಲ್ಲಿ ನೀರನ್ನು ಸಂರಕ್ಷಣೆ ಮಾಡಿದ್ದಾರೆ, ಹಾಗಾಗಿ 100 ರಷ್ಟು ಬೆಳೆಯಾಗಿದೆ ಎಂದು ಹೇಳಿದರು.

ಯಾವುದೇ ಹಾಲಿ ಸಚಿವರ ಮನೆ ಮೇಲೆ ದಾಳಿ ನೆಡೆದಿಲ್ಲ ಎಂದು ಈಂದನ ಸಚಿವರ ವಿರುದ್ದ ಪರೋಕ್ಷವಾಗಿ ಹೇಳಿದರು. ಮತ್ತೊಂದೆಡೆ ಕಂತೆ ಕಂತೆ ನೋಟು ಸಿಕ್ಕಿದೆ, ಇದೆಲ್ಲಾ ಸಿದ್ದಾರಾಮಯ್ಯ ಸರ್ಕಾರದಲ್ಲಿ ಮಾತ್ರ ನೆಡೆಯಲು ಸಾಧ್ಯ ಎಂದು ಹೇಳಿದರು. ರ್ಯೆತರ ಮತ್ತು ಬಡವರ ಕಲ್ಯಾಣ ಅಭಿವೃಧ್ಧಿಗಾಗಿ ಶ್ರಮಿಸುತ್ತೇವೆ, ಈ ಬಾರಿ ಬಿಜೆಪಿ ಸರ್ಕಾರ, ಬನ್ನಿ ಬಿಜೆಪಿ ಗೆಲ್ಲಸಿ, ಅನಂತ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಮುಕ್ತಾಯ ಮಾಡಿದರು.

 

ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನಾನು ಈಗ ತಾನೆ ಆತ್ನಹತ್ಯೆ ಮಾಡಿಕೊಂಡ ರ್ಯೆತರ ಮನೆಗೆ ಹೋಗಿ ಇಲ್ಲಿಗೆ ಬಂದಿದ್ದೇನೆ, ನಾನು 75ನೇ ವರ್ಷಕ್ಕೆ ಕಾಲಿಟ್ಟೀದ್ದೆನೆ, ನನಗೆ ರಾಜ್ಯ ಎಲ್ಲವನ್ನು ಕೊಟ್ಟಿದೆ ಎಂದು ಹೇಳಿದರು. ರಾಜ್ಯದಲ್ಲಿಕಾನೂನು ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಮಹಾದಾಯಿ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೆವೆ ಎಂದು  ಹೇಳಿದರು. ರಾಜ್ಯದ 6.5 ಕೋಟಿ ಜನರಿಗೆ ಒಳ್ಳೆಯದು ಮಾಡಬೇಕು, ನನ್ನ ಮುಂದಿನ ಜೀವನ ಜನರ ಕಲ್ಯಾಣಕ್ಕಾಗಿ ಮೀಸಲಿಡುವುದೆ ನನ್ನ ಗುರಿ ಎಂದು ಹೇಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ