ಬಿ ಖರಾಬನ್ನು ಸಕ್ರಮ ಮಾಡಿದರೆ ಪಾಲಿಕೆಗೆ ಲಕ್ಷಾಂತರ ರೂಪಾಯಿ ಹಣ

https://www.propertywala.com/P78336424

ಬೆಂಗಳೂರು, ಫೆ.27-ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷದ ಸಾವಿರದ ನೂರ ಎಂಬತ್ಮೂರು ಎ ಮತ್ತು ಬಿ ಕರಾಬು ಇದ್ದು ಇದರಲ್ಲಿ ಕನಿಷ್ಠ 20 ಸಾವಿರ ಎಕರೆ ಬಿ ಖರಾಬನ್ನು ಸಕ್ರಮ (ರೆಗ್ಯುಲರೈಸ್) ಮಾಡಿದರೆ ಪಾಲಿಕೆಗೆ ಲಕ್ಷಾಂತರ ರೂಪಾಯಿ ಹಣ ಹರಿದುಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸಲಹೆ ನೀಡಿದರು.
ಪಾಲಿಕೆ ಸಭೆಯಲ್ಲಿಂದು ಪಾಲ್ಗೊಂಡು ಮಾತನಾಡಿದ ಅವರು, ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ ಪ್ರದೇಶದಲ್ಲಿ ಒಂದು ಲಕ್ಷದ ಸಾವಿರದ ನೂರ ಎಂಬತ್ಮೂರು ಖರಾಬು ಭೂಮಿ ಇದೆ ಎಂಬುದು ಗೊತ್ತಾಗಿದೆ. ಈ ಖರಾಬು ಭೂಮಿಯಲ್ಲಿ ಸಾವಿರಾರು ಅಪಾರ್ಟ್‍ಮೆಂಟ್ ತಲೆ ಎತ್ತಿವೆ. ಇವುಗಳಲ್ಲಿ ಬಿ ಖರಾಬು ಇರುತ್ತದೆ. ಆದರೆ ಪಾಲಿಕೆ ಅಧಿಕಾರಿಗಳು ನಕ್ಷೆ ಮಂಜೂರು ಮಾಡಲು ಬಿ ಖರಾಬು ಬಿಟ್ಟು ನಕ್ಷೆ ಮಂಜೂರಾತಿ ಮಾಡುತ್ತಿದ್ದಾರೆ. ಬಿಲ್ಡರ್‍ಗಳು ಬಿ ಖರಾಬನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಗಮನ ಸೆಳೆದರು.
ಸರ್ಕಾರ ಎ ಖರಾಬು ಭೂಮಿ ಹರಾಜು ಮಾಡಬಹುದು. ಆದರೆ ಬಿ ಖರಾಬು ಭೂಮಿ ಮಾರಾಟ ಮಾಡಲು ಬರುವುದಿಲ್ಲ್ಲ. ಹಾಗಾಗಿ ನೂರಾರು ಎಕರೆ ಬಿ ಖರಾಬು ಭೂಮಿ ಬಿಲ್ಡರ್‍ಗಳ ಪಾಲಾಗುತ್ತಿದೆ. ಬಿಬಿಎಂಪಿ ಆಡಳಿತ ಸರ್ಕಾರದ ಜತೆ ಮಾತುಕತೆ ನಡೆಸಿ ಇದನ್ನು ತಪ್ಪಿಸಲು ಕಾನೂನು ತಿದ್ದುಪಡಿ ಮಾಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾನೂನು ತಿದ್ದುಪಡಿ ಆದ ಮೇಲೆ ಒಂದು ಲಕ್ಷದ ಸಾವಿರದ ನೂರ ಎಂಬತ್ಮೂರು ಎಕರೆ ಭೂಮಿಯಲ್ಲಿ ಕನಿಷ್ಠ 20 ಎಕರೆ ಬಿ ಖರಾಬು ಭೂಮಿ ಸಿಗುತ್ತದೆ. ಈ ಖರಾಬು ಭೂಮಿಯನ್ನು ಒತ್ತುವರಿ ಮಾಡಿದವರಿಗೆ ಪರಭಾರೆ ಮಾಡಿದರೆ ಲಕ್ಷ ಲಕ್ಷ ಹಣ ಹರಿದು ಬರುತ್ತದೆ. ಈ ಬಗ್ಗೆ ಚಿಂತನೆ ಮಾಡಿ ಎಂದರು.
ರಾಜಕಾಲುವೆ ಒತ್ತುವರಿ ಮಾಡಿದವರು ಎನ್‍ಜಿಟಿ ಆದೇಶಕ್ಕೆ ವಿರೋಧವಾಗಿಯೂ ಅಲ್ಲ. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಎಲ್ಲೆಲ್ಲಿ ಬಿ ಖರಾಬು ಭೂಮಿ ಇದೆಯೋ ಅದನ್ನು ಸಕ್ರಮಗೊಳಿಸಿದರೆ ಕೋಟ್ಯಂತರ ಹಣ ಬರಲಿದೆ ಎಂದು ತಿಳಿಸಿದರು.
ಪದ್ಮನಾಭರೆಡ್ಡಿಯವರ ಸಲಹೆಗೆ ಮೇಯರ್ ಸ್ಪಂದಿಸಿ ಇದು ಉತ್ತಮ ಸಲಹೆ. ಈ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ